Blog
ಕಾರ್ಪೋರೇಟ್ ಆಶಾಕಿರಣ
ಅದರಲ್ಲಿ ಮೊದಲಿಗರಾಗಿ ಅಚ್ಚುತ್ ಗೌಡ ಎಂಡಿ ಫಿಡಿಲಿಟಸ್ ಕಾರ್ಪ್, ಬೆಂಗಳೂರು ಅವರು ಕೊರೋನ ಸಂಕಷ್ಟ ಪರಿಸ್ಥಿತಿಯಲ್ಲಿ ತಮ್ಮ ಸಂಸ್ಥೆಯ ನೌಕರಿರಿಗೆ ಮತ್ತು ಸಿಬ್ಬಂದಿಗಳಿಗೆ ವ್ಯವಸ್ಥೆಮಾಡಿದ್ದಾರೆ ಎಂದು ತಿಳಿಯೋಣ.
ಅಚ್ಚುತ್ ಗೌಡ (ಎಂಡಿ ಫಿಡಿಲಿಟಸ್ ಕಾರ್ಪ್, ಬೆಂಗಳೂರು):- ಕೊರೋನವು ನಮ್ಮನ್ನೆಲ್ಲ ಮೊದಲನೆಯ ಅಲೆಯಲ್ಲಿ ಗಾಬರಿಯ ಜೊತೆಗೆ ಭಯವನ್ನು ತುಂಬಿಸಿತ್ತು ಆದರೆ ಅಂತಹ ಪರಿಸ್ಥಿತಿಯಲ್ಲು ನಾವು ಕುಗ್ಗದೆ ಬಿಬಿಎಂಪಿಯ ಸಹಾಯದೊಂದಿಗೆ ಅವರ ನೆರವನ್ನು ಪಡೆದು ಯಾವ ಕೆಲಸವನ್ನು ನಿಲ್ಲಿಸದೆ ದಿನನಿತ್ಯ ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ಆದರೂ ಸಹ ಈ ಕೊರೋನ ಯಾರನ್ನು ಬಿಟ್ಟಿಲ್ಲ ನನ್ನನ್ನು ಸೇರಿಸಿಕೊಂಡು ನಮ್ಮ ಸಂಸ್ಥೆಯ ನೌಕಕರರಿಗೂ ತೊಂದರೆಯನ್ನು ಮಾಡಿತು, ಆದರೂ ಅದಕ್ಕೆ ಮಾನಸಿಕವಾಗಿ ಕುಗ್ಗದೆ ಅದನ್ನು ಎದುರಿಸಿದ್ದೇವೆ. ಹಾಗೆಯೇ ಅದಕ್ಕೆ ಬೇಕಾದ ಔಷದಿಗಳನ್ನು ಒದಗಿಸುವ ಮೂಲಕ ಹಾಗೂ ವ್ಯಾಕ್ಸಿನೇಷನ್ ಅನ್ನು ಪ್ರತಿಯೊಬ್ಬರಿಗೂ ಹಾಕಿಸುವುದಲ್ಲದೆ, ಪರಿಸ್ಥಿಯನ್ನು ಅರಿತು ಸಮಾಜ ಸೇವಾ ಕಾರ್ಯಕ್ರಮಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ. ಸಮಯಕ್ಕೆ ಸರಿಯಾಗಿ ಮತ್ತು ತೊಂದರೆಯನ್ನು ಎದುರಿಸಲು ಬೇಕಾದ ಸಹಕಾರವನ್ನು ಕೊಟ್ಟಿದ್ದೇವೆ. ಅದಲ್ಲದೆ ಶ್ರೀ ವಿನಯ್ ಗುರೂಜಿ ಅವರ ಆರ್ಶೀವಾದದೊಂದಿಗೆ ಅವರ ಸಾರಥ್ಯದಲ್ಲಿ ಜನರಿಗೆ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನಲ್ಲಿ ಆರಂಬಿಸಿದ್ದೇವೆ. ಕೊರೋನ ಮುಕ್ತ ಸಮಾಜವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.
ವಿಶ್ವನಾಥ್ (ನಿರ್ದೇಶಕರು, ಮೈಂಡ್ ಟ್ರೀ):- ಗುರೂಜಿ ಹಾಗೂ ನನ್ನೆಲ್ಲ ಸ್ನೇಹಿತರಿಗೂ ವಂದಿಸುತ್ತಾ ಕೊರೋನದ ಮೊದಲನೆ ಅಲಗಿಂತ ಎರಡನೆ ಅಲೆಯೂ ಎಲ್ಲರನ್ನೂ ಅಲುಗಾಡಿಸಿ ಬಿಟ್ಟಿದೆ. ನಮ್ಮ ಸಂಸ್ಥೆಯಲ್ಲಿ 24 ಸಾವಿರಕ್ಕೂ ಹೆಚ್ಚು ಜನರು ನೌಕಕರಿದ್ದಾರೆ ಅವರೆಲ್ಲರಿಗೂ ನಾವು ಕೊರೋನದ ಮುಚ್ಚೆರಿಕೆಯನ್ನು ನೀಡುವುದರ ಜೊತೆಗೆ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಒದಗಿಸಿದೆವು, ಅಲ್ಲದೆ ಕಂಪನಿಯಲ್ಲಿಯೇ ಕೊರೋನಕ್ಕೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಡಾಕ್ಟರ್ ಮತ್ತು ಬೆಡ್ ವ್ಯವಸ್ಥೆಯನ್ನ ಮಾಡಿದೆವು, ಅದಲ್ಲದೆ ಬೇರೆ ಬೇರೆ ಕಡೆ ಬೆಡ್ ವ್ಯವಸ್ಥೆ ತೊರೆಯದಿದ್ದಾಗ ನಮ್ಮಲ್ಲಿ ಅದರ ವ್ಯವಸ್ಥೆಯನ್ನು ಮಾಡಿದೆವು ಆಪೋಲೋ, ಮಣಿಪಾಲ್ ಅಂತಹ ಆಸ್ಪತ್ರೆಗಳ ಜೊತೆ ಕೈಜೋಡಿಸುವ ಮೂಲಕ ವಾಕ್ಸಿನೇಷನ್ ಕೊಡುವ ವ್ಯವಸ್ಥೆಯನ್ನು ನೌಕಕರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಇದರ ಜೊತೆಗೆ ಕೊರೋನದಿಂದ ಮಾನಸಿಕವಾಗಿ ಕುಗ್ಗಿರುವವರಿಗೆ ಸೈಕೋಟೆರಫಿಯ ವ್ಯವಸ್ಥೆಯನ್ನು ಮಾಡಿದ್ದೇವೆ.
ರಾಘವ ಸುವರ್ಣ( ನಿರ್ದೇಶಕರು ಸಾಪ್ಟೆಕ್ ಇಂಡಿಯಾ ):- ನಮ್ಮಲ್ಲಿ 500 ಜನ ಕೆಲಸಗಾರರಿದ್ದಾರೆ, ಹಾಗಾಗಿ ನಮ್ಮ ಕೈಯಲ್ಲಿ ಆದಷ್ಟು ಕೊರೋನದ ನಿವಾರಣೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಯಾವೊಬ್ಬನ್ನು ಕೆಲಸದಿಂದ ವಜಾಗೊಳಿಸುವ ಕಾರ್ಯವನ್ನು ತೆಗೆದುಕೊಂಡಿಲ್ಲ. ಮತ್ತು ನೌಕರರಿಗೆ ಮನೆಯಿಂದ ಕಾರ್ಯ ನಿರ್ವಹಿಸುವ ವ್ಯವಸ್ಥೆಯನ್ನು ಮಾಡಿರುವುದರಿಂದ, ಉಳಿದಂತೆ ನಮ್ಮಲ್ಲಿ 60 ಜನರು ಡ್ರೈವರ್ರ್ ಇದ್ದಾರೆ ಅವರಿಗೆ ಪ್ರತಿ ತಿಂಗಳು 25 ಸಾವಿರ ವೇತ ಕೊಡುವ ಜೊತೆಗೆ ಅವರ ಆರೋಗ್ಯದ ಹಿತದೃಷ್ಟಿ ಯಿಂದ ಔಷದಿಯನ್ನು ಒದಗಿಸುವ ಮೂಲಕ ಎಲ್ಲರಿಗೂ ವಾಕ್ಸಿನೇಷನ್ ಕೊಡಿಸುವ ಮೂಲಕ ಮೂಲ ಸೌಕರ್ಯವನ್ನು ವದಗಿಸುವಂತಹ ನಮ್ಮ ಟೀಂಗಳಿಗೂ ಎಲ್ಲಾ ರೀತಿಯ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದ್ದೇವೆ. ಅಲ್ಲದೆ ಕೊರೋನ ಇನ್ಸುರೆನ್ಸ್ ಪ್ರತಿಯೊಬ್ಬ ನೌಕರರಿಗೂ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಕೊರೋನವು ಎಲ್ಲರನ್ನು ಮಂಕಾಗಿಸಿದೆ ಹಾಗಿಗಿ ಮಾನಸಿಕ ಸೈರ್ಯ ತುಂಬಲು ನಮ್ಮಲ್ಲಿ ಪ್ರತಿ ತಿಂಗಳು ಅವರ ಬಗ್ಗೆ ದೈರ್ಯವನ್ನು ತುಂಬುವ ಸಲುವಾಗಿ ನೌಕಕರಿಗೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಕೆಲಸ ಮಾಡುತ್ತಿದ್ದೇವೆ.
ನಿತೇಶ್ ಮೂರ್ತಿ ( ಮುಖ್ಯಸ್ಥರು, ಸೌಲಭ್ಯ ನಿರ್ವಹಣೆ, ಬ್ರಿಲಿಯೋ):- ಕಾರ್ಪೋರೇಟ್ ಆಶಾಕಿರಣ ಕಾರ್ಯಕ್ರಮಕ್ಕೆ ನನಗೂ ಕರೆ ಕೊಟ್ಟಿದ್ದಕ್ಕೆ ಶ್ರೀ ವಿನಯ್ ಗುರೂಜಿ ಅವರಿಗೆ ವಂದಿಸುತ್ತಾ. ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಅವಕಾಶವನ್ನು ಕೊಟ್ಟಂತಹ ನನ್ನ ಬ್ರಿಲಿಯೋ ಕಂಪನಿಗೆ ವಂದಿಸುತ್ತಾ. ಕೊರೋನ ಒಂದು ರೀತಿ ಎಲ್ಲರಿಗೂ ಒಂದು ಅಡ್ಡಗೋಡೆಯಂತೆ ನಿಂತಿದೆ ಹಾಗಾಗಿ ಇದರ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ ಹಾಗಾಗಿ ಅದಕ್ಕ ಬೇಕಾದಂತಹ ಎಲ್ಲಾ ಕಾರ್ಯಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಅದರಲ್ಲಿ ಕೊರೋನದ ಮೊದಲನೆಯ ಅಲೆಯಲ್ಲಿ ನೌಕಕರ ಆರೋಗ್ಯದ ಹಿತದಿಂದ ಕೆಲಸವರಿಗೆ ತಮ್ಮತಮ್ಮ ಮನೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟೆವು ಅವರಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಿ ಆಫೀಸ್ ಬರಲು ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಟ್ಟೆವು ಅದರ ಜೊತೆಗೆ ಅವರೆಲ್ಲರೂ ಮನೆಗೆ ಯಾವ ತೊಂದರೆ ಇಲ್ಲದೆ ತಲುಪುವಂತಹ ಸೌಲಭ್ಯವನ್ನು ಮಾಡಿಕೊಟ್ಟೆವು ಜೊತೆಗೆ ಮೆಡಿಕಲ್ ಟೆಸ್ಟ್ ಮಾಡುವ ಮೂಲಕ ಅದಕ್ಕೆ ಬೇಕಾದ ಔಷದಿಗಳು, ಮಾಸ್ಕ, ಸ್ಯಾನಿಟೈಜೇಷನ್ ಇದೆಲ್ಲವನ್ನೂ ದಿನನಿತ್ಯ ಮಾಡಿದೆವು. ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಲು ವ್ಯವಸ್ಥೆ ಮಾಡಿಕೊಟ್ಟೆವು, ಅವರಿಗೆ ಆಹಾರವದಗಿಸುವ ಎಲ್ಲಾ ಜವಾಬ್ದಾರಿಯನ್ನು ಕಂಪನಿಯೇ ವಹಿಸಿಕೊಂಡಿತ್ತು. ಮನೆಯಿಂದ ಕೆಲಸ ಮಾಡುವವರಿಗೆ ಇಂಟರ್ ನೆಟ್, ಲ್ಯಾಪ್ ಟ್ಯಾಪ್, ಯುಪಿಎಸ್‍ಸಿ , ಇವುಗಳ ಅನುಕೂಲವನ್ನು ಮಾಡಿಕೊಟ್ಟೆವು ನಮ್ಮ ನಾಲ್ಕು ಶಾಖೆಯಲ್ಲು ಇದೇ ತರಹದ ವ್ಯವಸ್ಥೆಯನ್ನು ಕೈಗೊಂಡಿದ್ದೇವೆ. ಕೊರೋನ ಯಾವುದೇ ಬೇಕಾಗಿದ್ದರು ನೌಕರರಿಗೆ ತಲುಪಿಸುವ ಎಲ್ಲಾ ಕಾರ್ಯಕ್ರಮವನ್ನು ಕೈಗೊಂಡಿದ್ದೇವೆ. ಕೋವಿಡ್ ಬಂದರಿಗೆ ಅಡ್ವಾನ್ಸ್ ಓಮ್ ಕೇರ್ ವ್ಯವಸ್ಥೆ ನೀಡುವ ಮೂಲಕ ಅವರಿಗೆ ಸಹಕಾರವನ್ನು ನೀಡಿದ್ದೇವೆ.
ಅವಿನಾಶ್ ಗೌಡ( ಮಾನವ ಸಂಪನ್ಮೂಲ ನಿರ್ವಾಹಕರು ಎಲ್ ಕೆ ಕ್ಯೂ ಇಂಡಿಯಾ):- ನಮ್ಮನ್ನು ನಂಬಿ 10 ವರ್ಷದಿಂದ ನಮ್ಮೊಂದಿಗೆ ದುಡಿಯುತ್ತಿರುವ ನಮ್ಮ ನೌಕಕರಿಗೆ ಸರಿಯಾದ ಸೌಲಭ್ಯವನ್ನು ವದಗಿಸುವುದು ನಮ್ಮ ಜವಬ್ದಾರಿ ಹಾಗಾಗಿ ಅವರಿಗೆ ಸರಿಯಾಗಿ ವೇತನ ನೀಡುವ ಮೂಲಕ ಕೊರೋನಕ್ಕೆ ಬೇಕಾದ ಮುನ್ನೆಚ್ಚರಿಕೆಯನ್ನ ಒದಗಿಸಿದ್ದೇವೆ. ಕೆಲಸ ಮಾಡುತ್ತಿರುವ ನೌಕಕರ ಕುಟುಂಬದವರು ಕೋವಿಡ್ ಸಮಸ್ಯಯನ್ನು ಎದುರಿಸುತ್ತಿದ್ದರೆ ಅವರಿಗೆ ಬೆಡ್ ಮತ್ತು ಔಷಧಿಗಳ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನು ಮಾಡಿದ್ದೇವೆ. ಮತ್ತೆ ಆರ್ಥಿಕವಾಗಿ ತೊಂದರೆ ಎದುರಿಸುತ್ತಿದ್ದರೆ ಅದಕ್ಕೆ ಸಹಕರಿಸಿದ್ದೇವೆ. ಕೋವಿಡ್ ಕಿಟ್ ವಿತರಿಸುವ ಸೌಲಭ್ಯವನ್ನು ಮಾಡಿದ್ದೇವೆ. ಮನೆಯಿಂದ ಕೆಲಸ ಮಾಡುವವರಿಗೆ ಕೆಲಸ ಮಾಡಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದ್ದೇವೆ.
ಈ ಐದು ಕಂಪನಿಯ ಕೊರೋನ ವಾರಿಯರ್ಸ್ ವೈಕರಿ ಮತ್ತು ಸಹಭಾಗಿತ್ವವನ್ನು ನೋಡಿದಾಗ ಕೊರ್ಪೋರೇಟ್ ಆಶಾಕಿರಣ ಎಂಬ ಪದಕ್ಕೆ ನಿಜವಾಗಿಯೂ ಜೀವ ತುಂಬಿದಂತೆ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಾನಸಿಕವಾಗಿ ದೈಹಿಕವಾಗಿ ಮಾನವ ಕುಗ್ಗಿಹೋಗಿರುತ್ತಾನೆ ಇದೆಲ್ಲದರಿಂದ ಸಡೃಡ ಗೊಳಿಸಿ ಪರಿಪೂರ್ಣನಾಗಿ ಮಾಡಲು ಅವನು ದುಡಿಯು ಸಂಸ್ಥೆ ಕೊಟ್ಟಾಗ ತುಂಬಾ ಹೆಮ್ಮೆಯ ಸಂಗತಿ ಎನಿಸುತ್ತದೆ. ಇದೇ ತರಹ ಎಲ್ಲರೂ ಒಬ್ಬರಿಗೊಬ್ಬರು ಸಹಕರಿಸಿದಾಗ ಇನ್ನೂ ಪರಿಸ್ಥಿತಿಯೂ ತುಂಬಾ ಸಲಭವಾಗಿ ಕೊರೋನದ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ. ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಸಮಾಜಮುಖಿಯಾಗಿ ಕೆಲಸ ಮಾಡೋಣ. ಮತ್ತು ಇಂತಹ ಸಂಸ್ಥೆಗಳು ಇನ್ನಷ್ಟು ಉಲ್ಬಣಗೊಳ್ಳಲಿ. ಇದಲ್ಲದೆ ನಮ್ಮ ಭರವಸೆಯ ಬೆಳಕು, ಈ ಸಂವಾದ ಕಾರ್ಯಕ್ರಮ ಕೇಂದ್ರ ಬಿಮದುವಾಗಿರುವ ಯುವಕರಿಗೆ ಸದಾ ಸ್ಪೋರ್ತಿಯಾಗಿರುವ ನಮ್ಮ ನಡುವಿನ ಅವಧೂತರಾದ ಶ್ರೀ ವಿನಯ್ ಗುರೂಜಿ ಅವರು ಕೊರೋನಕ್ಕೆ ಇನ್ನೂ ಏನೇನು ಮಾಡಬಹುದು ಎಂದು ತಿಳಿಸುತ್ತಾರೆ.
ಕೊರೋನ ಹೋಗಲಾಡಿಸಲು ಒಬ್ಬರಿಗೊಬ್ಬರು ಸಹಕರಿಸಿ – ಅವಧೂತ ಶ್ರೀ ವಿನಯ್ ಗುರೂಜಿ
ಪ್ರಪಂಚ ಪರಿವರ್ತನೆಗೆ ದಾರಿಯಾಗಬೇಕು – ಅವಧೂತ ಶ್ರೀ ವಿನಯ್ ಗುರೂಜಿ
ಒಂದು ಸಂಸ್ಥೆಯನ್ನು ನಿರ್ವಹಿಸುವಂತಹ ಒಬ್ಬ ಸಂಸ್ಥಾಪಕ ಎಲ್ಲರಿಗೂ ತಂದೆ ಇದ್ದಂತೆ ಹಾಗಾಗಿ ನಮ್ಮದೇಶದ ಮುಂದಿನ ಪ್ರಜೆಗಳನ್ನ ಹೇಗೆಲ್ಲ ಮಾದರಿ ಯುವಕರಾಗಿ ಮಾಡಬೇಕು ಎಂದ ಕೆಲಸವನ್ನು ಎಲ್ಲರೂ ಮಾಡಿದ್ದೀರಿ. ಹಿಂದೆ ಇದ್ದ ರಾಜರ ಆಡಳಿತದ ಹೊಂದಾಣಿಕೆ ಇಂದು ನಿಮ್ಮಲ್ಲಿ ಕಾಣಲು ಸಾಧ್ಯವಾಗುತ್ತಿದೆ. ಅದರ ಜೊತೆಗೆ ಕೊರೋನ ಬರಲು ನಾವೇ ಕಾರಣರಾಗಿದ್ದೇವೆ ಪರಿಸರವು ನಮ್ಮ ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ಮಾಡಿಕೊಂಡಿದ್ದೇವೆ. ಹಾಗಾಗಿ ಶಾಸ್ರಿಯಾವಾಗಿ ನೋಡುವುದಾದರೆ ಅಗ್ನಿ ಹೋತ್ರವನ್ನು ಮಾಡುವುದರಿಂದ , ಗಿಡಮರಗಳನ್ನು ಬಳೆಸುವುದರ ಜೊತೆಗೆ ಪ್ರತಿಯೋಬ್ಬರ ನೌಕಕರು ತಮ್ಮ ಮನೆಯಲ್ಲಿ ಆಯುರ್ವೇದ ಗಿಡಗಳನ್ನು ನೆಡುವ ಮೂಲಕ ಪರಿಸರದ ಸಮತೋಲನವನ್ನು ಸ್ವಲ್ಪ ಮಟ್ಟಿಗೆ ಕಾಪಾಡೋಣ. ಇನ್ನೂ ಮುಂದೆ ಆದರೂ ಕೊರೋನದ ಮೂರನೆ ಅಲೆಯು ಬರುವ ಮುಂಚೆ ಎಲ್ಲರೂ ಅವರ ಮೂಲವನ್ನು ತಿಳಿದು ಅದಕ್ಕೆ ಬೇಕಾದ ಎಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳೋಣ. ಮನುಷ್ಯನಿಗೆ ಹಣ ಎಷ್ಟು ಮುಖ್ಯವೋ ಹಾಗೆ ಉಸಿರಾಡಲು ಗಾಳಿ,ನೀರು, ಆರೋಗ್ಯವೂ ಬಹಳ ಮುಖ್ಯ ಹಾಗಾಗಿ ಅದನ್ನು ಕಾಪಾಡಿಕೊಳ್ಳಲು ಎಲ್ಲರೂ ಯೋಗ ಅಭ್ಯಸವನ್ನು ಪ್ರತಿಯೋಬ್ಬರು ಮೈಗೂಡಿಸಿಕೊಳ್ಳಿ. ಕೊರೋನವನ್ನು ತಡೆಯುವುದಕ್ಕೆ ನಾವು ಸ್ವಲ್ಪ ಎಡವಿದರು ಕೂಡ ಮುಂದೆ ಮಾನವ ಜೀವಿಸಲು ಕಷ್ಟ ಪಡುವ ಪರಿಸ್ಥಿತಿ ಬರಹುದು. ಒಬ್ಬರಿಗೊಬ್ಬರು ಇನ್ನಷ್ಟು ಸಹರಿಸಿ. ಎಲ್ಲರೂ ಒಟ್ಟಾಗಿ ಆಸ್ಪತ್ರೆಗಳನ್ನು ಇನ್ನಷ್ಟು ಕ್ರಿಯೆಟ್ ಮಾಡಿ. ಬೆಡ್ ವ್ಯವಸ್ಥೆ ಮತ್ತು ಆಕ್ಸಿಜನ್ ತೊಂದರೆ ಬಾರದಂತೆ ಕೈಜೋಡಿಸಿ. ಉಳ್ಳವರು ಆಹಾರ ವಿತರಣೆಯನ್ನು ಬಡವರಿಗೆ ನೀಡುವ ಮೂಲಕ ಅವರ ಕಷ್ಟಗಳಿಗೆ ಸಹಕರಿಸಿ. ಕೋವಿಡ್ ನಿಂತ ತಮ್ಮ ತಂದೆತಾಯಿಯನ್ನು ಕಳೆದು ಕೊಂಡ ಮಕ್ಕಳನ್ನು ದತ್ತು ಪಡೆದು ಅವರ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಮಾಡೋಣ. ಸರ್ಕಾರವನ್ನು ಅವಲಂಬಿಸುವ ಸ್ವಯಂ ಎಚ್ಚರಿಕೆಯಿಂದ ಬದುಕುವುದನ್ನು ಕಲಿಯೋಣ. ರಾಜಕೀಯ ವ್ಯಕ್ತಿಗಳನ್ನು ಇಂತಹ ಕಲಸದಲ್ಲಿ ಅವಲಂಬಿತವಾಗುವಂತೆ ಪ್ರೋತ್ಸಾಹಿಸೋಣ. ಪ್ರತಿ ವರ್ಗಗಳಿಗೂ ಕೊರೋನ ಮಾಹಿತಿಯನ್ನು ತಲುಪಿಸುವ ಕೆಲಸ ಮಾಡೋಣ. ಸರಳ ಜೀವನ ನಡೆಸುವ ಮೂಲಕ ಐಶರಾಮಿ ಜೀವನವನ್ನು ಕಡಿಮೆ ಮಾಡಿಕೊಳ್ಳೋಣ. ಅನವಶ್ಯಕವಾಗಿ ಖರ್ಚು ಮಾಡುವ ಹಣವನ್ನು ಸಮಾಜ ಹಿತದ ಕೆಲಸಗಳಿಗೆ ಬಳಕೆ ಮಾಡೋಣ. ಮಾನವ ಜೀವಿಸಲು ಬೇಕಾದ ದಿನ ನಿತ್ಯದ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಮನವರಿಕೆಯನ್ನು ಮಾಡೋಣ. ಆಯುರ್ವೇದದ ಬಳಕೆಯನ್ನು ಹೆಚ್ಚಾಗಿ ಬಳಸುವಂತೆ ತಿಳಿಸೋಣ. – ಅವಧೂತ ಶ್ರೀ ವಿನಯ್ ಗುರೂಜಿ.
ಕೊರೋನಕ್ಕೆ ಕುಗ್ಗುವುದನ್ನು ಬಿಟ್ಟು ಸಮಾಜ ವಳಿತಿ ಇನ್ನಟ್ಟು ಏನಾದರೂ ಮಾಡಬೇಕು ಎನ್ನುವ ತುಡಿತ ಎಲ್ಲರಿಗೂ ಬರಲಿ. ಎಲ್ಲರೂ ಇನ್ನಷ್ಟು ಸಕ್ರಿಯವಾಗಿ ಇಂತಹ ಪರಿಸ್ಥಿತಿಯನ್ನು ಎದುರಿಸೋಣ. ಇಲ್ಲಿಯ ವರೆಗೂ ಬಹಳ ನೀರಳವಾಗಿ ಬಹಳ ಸರಳವಾಗಿ ತಾಳ್ಮೆಯಿಂದ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುವುದು ಬಹಳ ಮುಖ್ಯ ಹಾಗಾಗಿ ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದಂತಹ ಮಾಲತೇಶ್ ಸಿಗಸೆ ಅವರಿಗೆ ಮನಸ್ಸಿನ ಮೂಲಕ ಧನ್ಯವಾದಳನ್ನು ಅರ್ಪಿಸೋಣ.