EVENTS

"ಕೆ ಎಸ್ ಈಶ್ವರಪ್ಪ ಅವರ ಮೊಮ್ಮೊಗ ಪೃಥ್ವಿ ಮದುವೆ ಆರತಕ್ಷತೆಯಲ್ಲಿ ಶ್ರೀ ವಿನಯ್ ಗುರೂಜಿ"

Avadhootha
Sri Vinay Guruji
Avadhootha
Sri Vinay Guruji

20 April 2022 – ಶಿವಮೊಗ್ಗದ ಶುಭಶ್ರೀ ಸಮುದಾಯ ಭವನದಲ್ಲಿ ಜರುಗಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮೊಮ್ಮೊಗ ಪೃಥ್ವಿ ಮದುವೆ ಆರತಕ್ಷತೆಯಲ್ಲಿ ಶ್ರೀ ವಿನಯ್ ಗುರೂಜಿ ಅವರು ಭಾಗಿಯಾಗಿ ನವದಂಪತಿಗಳಿಗೆ‌ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ,‌ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಸೇರಿದಂತೆ ಹಲವು ಗಣ್ಯರು ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಭೇಟಿಯಾದರು.

"ಆಶ್ರಮದ ಭಕ್ತರೊಡಗೂಡಿ ಹಲವು ಹಣ್ಣಿನ ಮರಗಳನ್ನು‌ ಆಶ್ರಮದ ಆವರಣದ ಸುತ್ತಮುತ್ತ ನೆಟ್ಟರು"

Avadhootha
Avadhootha
Sri Vinay Guruji
Sri Vinay Guruji
Sri Vinay Guruji
Sri Vinay Guruji

17 April 2022 – ಇಂದು ಗೌರಿಗದ್ದೆಯ ದತ್ತಾಶ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಆಶ್ರಮದ ಭಕ್ತರೊಡಗೂಡಿ ಹಲವು ಹಣ್ಣಿನ ಮರಗಳನ್ನು‌ ಆಶ್ರಮದ ಆವರಣದ ಸುತ್ತಮುತ್ತ ನೆಟ್ಟರು. ಆಶ್ರಮದ‌ ಅನುಯಾಯಿಗಳು ಈ ಕಾರ್ಯದಲ್ಲಿ ಅತ್ಯುತ್ಸಾಹದಲ್ಲಿ ಭಾಗವಹಿಸಿದ್ದರು.

"ಮಾನವ ಧರ್ಮ- ಶ್ರೇಷ್ಠ ಧರ್ಮ" ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರವಚನ

14 April 2022 – ಅವಧೂತ‌‌ ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಘಟಿಕೋತ್ಸವ ಭವನದಲ್ಲಿ “ಮಾನವ ಧರ್ಮ- ಶ್ರೇಷ್ಠ ಧರ್ಮ” ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ‌ ಕಾರ್ಯಕ್ರಮಕ್ಕೆ ಆಗಮಿಸಿದ ಅವಧೂತರನ್ನು ಮಹಿಳೆಯರ ಪೂರ್ಣಕುಂಭ‌ ಸ್ವಾಗತದ ಮೂಲಕ ಮತ್ತು ವೀರಾಂಜನೇಯ ತಂಡದಿಂದ ಡೊಳ್ಳು ಕುಣಿತದ ಮೂಲಕ ಸ್ವಾಗತ ಕೋರಲಾಯಿತು. ಇದಕ್ಕೂ ಮುನ್ನ ರಾಗಸಂವರ್ಧಿನಿ ಸಂಗೀತ ಶಾಲೆಯ ಸಂಗೀತಗಾರರು ಭಕ್ತಿ ಗೀತೆಗಳ‌ ಮೂಲಕ ಸಭಿಕರನ್ನು ಮನರಂಜಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಮಾನವ ಧರ್ಮ ಕುರಿತ ಪ್ರವಚನ ಕಾರ್ಯಕ್ರಮದಲ್ಲಿ ನೂರಾರು ಅನುಯಾಯಿಗಳು ಭಾಗವಹಿಸಿದ್ದರು.

ತಾಯಿ ಸರಸ್ವತಿ ದೇವಿಯ ಮೂರ್ತಿ ನೀಡಿ ಗೌರವಿಸಿದರು

Sri Vinay Guruji
Sri Vinay Guruji
Sri Vinay Guruji
Sri Vinay Guruji

14 April 2022 – ಅವಧೂತ ಶ್ರೀ ವಿನಯ್ ಗುರೂಜಿ ಅವರು ಮೈಸೂರು ಸುತ್ತೂರು ಮಠದ ಜಗದ್ಗುರು ಶ್ರೀ‌ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಶ್ರೀಗಳು ಶ್ರೀವಿನಯ್ ಗುರೂಜಿ ಅವರನ್ನು ಸನ್ಮಾನಿಸಿ ಸತ್ಕರಿಸಿದರು. ತಾಯಿ ಸರಸ್ವತಿ ದೇವಿಯ ಮೂರ್ತಿ ನೀಡಿ ಗೌರವಿಸಿದರು. ಇದೇ ಸಮಯದಲ್ಲಿ ಅವಧೂತರು ಶ್ರೀಗಳ ಪಾದಕ್ಕೆ ನಮಿಸಿ ಆಶೀರ್ವಾದ ಪಡೆದುಕೊಂಡರು.

ಸುತ್ತೂರು ಮಠದ ಶ್ರೀ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು‌ ಭೇಟಿ ಮಾಡಿ ಕುಶಲೋಪರಿ‌ ವಿಚಾರಿಸಿದರು.

Avadhootha
Sri Vinay Guruji
Sri Vinay Guruji
guru
Avadhootha
Sri Vinay Guruji

14 April 2022 – ಅವಧೂತ ಶ್ರೀ ವಿನಯ್ ಗುರೂಜಿ ಅವರ ಮೈಸೂರು ಭೇಟಿ ಸಂದರ್ಭದಲ್ಲಿ ಸುತ್ತೂರು ಮಠದ ಶ್ರೀ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು‌ ಭೇಟಿ ಮಾಡಿ ಕುಶಲೋಪರಿ‌ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಶಾಲು, ರುದ್ರಾಕ್ಷಿ ಮಾಲೆ ನೀಡಿ ಶ್ರೀಗಳನ್ನು ಗೌರವಿಸಿದರು. ಈ ಸಮಯದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ರಾಷ್ಟ್ರ ಪ್ರಾಣಿ ದತ್ತು ಸ್ವೀಕಾರ

guru
Avadhootha
Sri Vinay Guruji
Sri Vinay Guruji
Sri Vinay Guruji
Sri Vinay Guruji

14 April 2022 – ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ‌ ನೀಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನಂತರ ಮೃಗಾಲಯದಲ್ಲಿ ಗಿಡವನ್ನು ನೆಟ್ಟು ಅಂಬೇಡ್ಕರ್ ಜಯಂತಿಯನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದರು. ನಂತರ ರಾಷ್ಟ್ರ ಪ್ರಾಣಿ ಹುಲಿಯನ್ನು ದತ್ತು ಸ್ವೀಕರಿಸಿ ಸಾರ್ವಜನಿಕರಿಗೂ ವನ್ಯಜೀವಿಗಳನ್ನು ದತ್ತು ಸ್ವೀಕರಿಸಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ವಿನಯ್ ಗುರೂಜಿ ಅನುಯಾಯಿಗಳು ಕರಿಚಿರತೆ, ಕಾಳಿಂಗ ಸರ್ಪವನ್ನು‌ ದತ್ತು ಪಡೆದುಕೊಂಡು ಮಾದರಿಯಾದರು. ನಂತರ ಮೃಗಾಲಯ ಸಿಬ್ಬಂದಿಗೆ ದಿನಸಿ ಕಿಟ್ ವಿತರಿಸಿ ಆಶೀರ್ವದಿಸಿದರು..

ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಸುಹಾಸ್ ಅವರ ಮನೆಗೆ ಭೇಟಿ‌ ನೀಡಿದ ಅವಧೂತ ಶ್ರೀ ವಿನಯ್ ಗುರೂಜಿ

Vinay guruji
Guruji
Vinay
Pravachana
avadhootha

14 April 2022 – ಅಂಬೇಡ್ಕರ್ ಜಯಂತಿ ಪ್ರಯುಕ್ತ ಮೈಸೂರಿನ ಅಶೋಕಪುರಂ ಕಾಲನಿಯ ಅಂತರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಸುಹಾಸ್ ಅವರ ಮನೆಗೆ ಭೇಟಿ‌ ನೀಡಿದ ಅವಧೂತ ಶ್ರೀ ವಿನಯ್ ಗುರೂಜಿ ಅವರು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವಂತೆ ಆಶೀರ್ವಾದ ಮಾಡಿದರು. ಅವರ ಮನೆಯಲ್ಲೇ ಉಪಹಾರ ಸ್ವೀಕರಿಸಿದ ಅವಧೂತರು ಸುಹಾಸ್ ಗೂ ಕೈ ತುತ್ತು ತಿನ್ನಿಸಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಕಿಕ್ ಬಾಕ್ಸರ್ ಸುಹಾಸ್ ಗೆ ಸಹಾಯ ಹಸ್ತ ನೀಡಿದರು.

ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ

Sri Vinay Guruji
Sri Vinay Guruji
Sri Vinay Guruji

14 April 2022 – ಮೈಸೂರು ಅಶೋಕಪುರಂ ನಲ್ಲಿರುವ ಅಂಬೇಡ್ಕರ್ ಪಾರ್ಕ್ ‌ನಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಇಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ‌ ಮಕ್ಕಳಿಗೆ ಅಂಬೇಡ್ಕರ್ ರಚಿತ ಸಂವಿಧಾನ ಪುಸ್ತಕವನ್ನು ನೀಡಿದರು

ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು

10 April 2022 – ಗೌರಿಗದ್ದೆಯ ಸ್ವರ್ಣಪೀಠಿಕಾಪುರ ಶ್ರೀ ದತ್ತಾಶ್ರಮದ ಅವಧೂತ ಶ್ರೀವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್- ಗೌರಿಗದ್ದೆ ಮತ್ತು ಪ್ರಸಾದ್ ನೇತ್ರಾಲಯ- ಉಡುಪಿ ಇವರ ನೇತ್ರತ್ವದಲ್ಲಿ ದಿನಾಂಕ 10/04/2022ರ ಭಾನುವಾರದಂದು ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ದಿನದಂದು ಕಣ್ಣಿನ ಪೊರೆ ಸಂಬಂಧಿ ದೃಷ್ಟಿ ದೋಷವಿರುವವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಲೆನ್ಸ್ ಅಳವಡಿಸಲಾಯಿತು. ಆಶ್ರಮದ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ರಾಮನವಮಿ ಸಪ್ತಾಹದ ಅಂಗವಾಗಿ ಕೊನೆಯ ದಿನ ಜರುಗಿದ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಚಿಕಿತ್ಸೆಗೆ ಬಂದವರಿಗೆ ಆಶೀರ್ವಚನ ನೀಡಿದರು ಹಾಗೂ ವೈದ್ಯರಿಗೆ ಸನ್ಮಾನ ಮಾಡಿ ಸಾಮಾಜಿಕವಾಗಿ ಅವರ ಸೇವೆಯನ್ನು ಅಪಾರವಾಗಿ ಪ್ರಶಂಸಿಸಿದರು.

ಮಂಗಳಮುಖಿಯರಿಗೆ ಆಹಾರ ಧಾನ್ಯ ಮತ್ತು ಬಾಗಿನ ಕೊಟ್ಟು ಗೌರವಿಸಲಾಯಿತು.

Sri Vinay Guruji
Sri Vinay Guruji
Sri Vinay Guruji
Sri Vinay Guruji
Vinay Guruja
Avadhootha
Guruji
Guruji

09 April 2022 –  ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ಮಂಗಳಮುಖಿಯರಿಗೆ ಪೂಜೆ ಮಾಡಿ ಅವರನ್ನೂ ನಮ್ಮೆಲ್ಲರಂತೆಯೇ ನೋಡುವಂತೆ ಸಾರ್ವಜನಿಕವಾಗಿ ಪ್ರೋತ್ಸಾಹ ಕೊಡಲು ಆಶ್ರಮದಿಂದ ಈ ಕಾರ್ಯವನ್ನು ಮಾಡಲಾಯಿತು. ಮಂಗಳಮುಖಿಯರ ಹೆಸರಲ್ಲೇ ಮಂಗಳ ಇದ್ದು, ಅಮಂಗಳವನ್ನು ಅವರು ತಡೆಯುವುದರಿಂದ ಜತೆಗೆ ಅವರು ಅರ್ಧನಾರೀಶ್ವರ ತತ್ವವನ್ನು ಹೊಂದಿರುವುದರಿಂದ ಅವರನ್ನು ಎಲ್ಲರಂತೆಯೇ ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎನ್ನುವುದು ಶ್ರೀ ವಿನಯ್ ಗುರೂಜಿ ಅವರ ಸಾಮಾಜಿಕ ಕಳಕಳಿ. ಇದರ ಜತೆಗೆ ಗ್ರಾಮಸ್ಥರಿಗೆ ಹಣ್ಣಿನ ಗಿಡಗಳನ್ನು ನೀಡುವ ಮೂಲಕ ರಾಮನವಮಿ ಸಪ್ತಾಹವನ್ನು ಆಚರಣೆ ಮಾಡಲಾಯಿತು.

ಅವಧೂತರನ್ನು ಭೇಟಿಯಾದ ಎಂಬಿ ಪಾಟೀಲ್

Sri Vinay Guruji
Sri Vinay Guruji
Sri Vinay Guruji

04 April 2022 – ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ, ಶಾಸಕ ಎಂಬಿ ಪಾಟೀಲ್ ಅವರು ಇಂದು ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಕೈಗೊಂಡರು.

Sri Vinay Guruji
Sri Vinay Guruji
Sri Vinay Guruji
Sri Vinay Guruji
Sri Vinay Guruji
Sri Vinay Guruji

02 April 2022 – ಮಧ್ಯಪ್ರದೇಶದ ಇಂದೋರ್ ಗೆ ಪ್ರವಾಸ ಕೈಗೊಂಡಿರುವ ಅವಧೂತ ಶ್ರೀ ವಿನಯ್ ಗುರೂಜಿ ಅವರು ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಕೈಗೊಂಡರು.
ಪ್ರಪಂಚದಾದ್ಯಂತ ಪ್ರಕೃತಿ ವಿಕೋಪಗಳಾಗುತ್ತಿರುವ ಸಮಯದಲ್ಲಿ, ಮುಂದಿನ ದಿನಗಳಲ್ಲಿ ಭಾರತಕ್ಕೆ ಹಾಗೂ ಪ್ರಪಂಚಕ್ಕೆ ಪ್ರಕೃತಿ ವಿಕೋಪಗಳು ಮತ್ತು ಹಿಂಸೆ ಕಡಿಮೆಯಾಗಲು ಹಾಗೂ ಮನುಕುಲದ ಒಳಿತಿಗಾಗಿ ಮೃತ್ಯುವನ್ನು ತಡೆಯುವ ಅತಿ ಶಕ್ತಿಶಾಲಿ ಜ್ಯೋತಿರ್ಲಿಂಗವಾದ ಮಹಾಕಾಳೇಶ್ವರನಿಗೆ ಲೋಕ ಕ್ಷೇಮಕ್ಕಾಗಿ ಸಂಕಲ್ಪ ಸಹಿತ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಶಿವ ನಿಗೆ ರುದ್ರಾಕ್ಷಿಯಿಂದ ಹಾಗೂ ಬೆಳ್ಳಿ ಬಿಲ್ವಪತ್ರೆಗಳಿಂದ ಅರ್ಚನೆ ಮಾಡಿ ಲೋಕಕ್ಷೇಮಕ್ಕಾಗಿ ಪ್ರಾರ್ಥನೆ ಮಾಡಲಾಯಿತು.
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮೂರನೇಯ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಉಜ್ಜಯನಿ ನಗರದಲ್ಲಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿರುವ ಲಿಂಗಗಳು ಭೂಮಿಯ ಮೇಲ್ಮೈಗಿಂತ ಎತ್ತರದಲ್ಲಿರುತ್ತದೆ. ಆದರೆ ಮಹಾಕಾಳೇಶ್ವರ ದೇವಾಲಯದ ಜ್ಯೋತಿರ್ಲಿಂಗವು ಭೂಮಿಯ ಮೇಲ್ಮೈಗಿಂತ ಕೆಳಗಿದ್ದು, ದಕ್ಷಿಣ ದಿಕ್ಕಿನಲ್ಲಿದೆ.

ಪುರಾಣ ಪ್ರಸಿದ್ಧ ಹೋಳಿ ಹಬ್ಬದ ಕಾಮದಹನೋತ್ಸದ ಶ್ರೀ ಕಾಮೇಶ್ವರನ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡರು

Sri Vinay Guruji
Avadhootha
Guruji
Guruji

28 March 2022 – ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮೇದೂರು ಗ್ರಾಮದಲ್ಲಿ ಜರುಗಿದ ಪುರಾಣ ಪ್ರಸಿದ್ಧ ಹೋಳಿ ಹಬ್ಬದ ಕಾಮದಹನೋತ್ಸದ ಶ್ರೀ ಕಾಮೇಶ್ವರನ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡು ಗ್ರಾಮಸ್ಥರಿಗೆ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಫಲ ತಾಂಬೂಲ ನೀಡಿ ಅವಧೂತರು ಗ್ರಾಮಸ್ಥರೊಂದಿಗೆ ಸಮಯ ಕಳೆದು ಉಭಯ ಕುಶಲೋಪರಿ ವಿಚಾರಿಸಿದರು.

ಉಚಿತ ಆರೋಗ್ಯ ತಪಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Avadhootha
Sri Vinay Guruji
Sri Vinay Guruji

26 March 2022 – ಶಿವಮೊಗ್ಗದ ವೈಷ್ಣವಿ ಚಾರಿಟಬಲ್ ಟ್ರಸ್ಟ್ ಹಾಗೂ ಆಶಾ ಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ಜ್ಯುವೆಲ್ ರಾಕ್ ರಸ್ತೆಯಲ್ಲಿ ಜರುಗಿದ ಉಚಿತ ಆರೋಗ್ಯ ತಪಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಮತ್ತು ಸಭಿಕರಿಗೆ ಅವಧೂತರು ಆಶೀರ್ವಚನ ನೀಡಿದರು.

ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ ಕೊನೆಯ ದಿನ ಅವಧೂತ ಶ್ರೀ ವಿನಯ್ ಗುರೂಜಿ ಅವರು ಶ್ರೀ ಸೂಕ್ತ ಹವನ ವಿಶೇಷ ಹೋಮ ಮತ್ತು ದೇವಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Guruji
Avadhootha
Sri Vinay Guruji
Sri Vinay Guruji
Avadhootha
Guruji

26 March 2022 – ಶಿವಮೊಗ್ಗದ ಶ್ರೀ ಮಾರಿಕಾಂಬ ದೇವಸ್ಥಾನ ಸೇವಾ ಸಮಿತಿ ಹಾಗೂ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಸಹಯೋಗದಲ್ಲಿ ಜರುಗಿದ 5 ದಿನದ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ ಕೊನೆಯ ದಿನ ಅವಧೂತ ಶ್ರೀ ವಿನಯ್ ಗುರೂಜಿ ಅವರು ಶ್ರೀ ಸೂಕ್ತ ಹವನ ವಿಶೇಷ ಹೋಮ ಮತ್ತು ದೇವಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಖಾತೆ ಸಚಿವರು ಶ್ರೀ ಕೆಎಸ್ ಈಶ್ವರಪ್ಪ ಹಾಗೂ ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ನ ಮುಖ್ಯಸ್ಥ ಕಾಂತೇಶ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರಿಗೆ ಅವಧೂತರು ಆಶೀರ್ವಚನ ನೀಡಿದರು.

ಇತಿಹಾಸ ಪ್ರಸಿದ್ದ ಹುಸ್ಕೂರು ಶ್ರೀ ಮದ್ದೂರಮ್ಮ ದೇವಿಯ ಜಾತ್ರೆ

Sri Vinay Guruji
Guruji
Guruji
Guruji

26 March 2022 – ಇತಿಹಾಸ ಪ್ರಸಿದ್ದ ಹುಸ್ಕೂರು ಶ್ರೀ ಮದ್ದೂರಮ್ಮ ದೇವಿಯ ಜಾತ್ರೆಯ ಅಂಗವಾಗಿ ಗೌರಿ ಗದ್ದೆಯ ಅವಧೂತ ಶ್ರೀ ವಿನಯ ಗುರೂಜೀ ಅವರು ಮದ್ದೂರಮ್ಮ ದೇವಿಗೆ ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತರಿಗೆ ಪ್ರವಚನ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಸ್ವಾಮಿ ಅವರು, ಬಿಜೆಪಿ ರಾಜ್ಯ ಉಪಾದ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ವಿದಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ ಅವರು, ಕೇಬಲ್ ಶ್ರೀನಿವಾಸ್ ರೆಡ್ಡಿ ಅವರು, ಹೂಡಿ ವಿಜಯ್ ಕುಮಾರ್ ಅವರು ಸೇರಿದಂತೆ ಅನೇಕ ಮುಖಂಡರು ಹಾಗೂ ಭಕ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಐತಿಹಾಸಿಕ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರುಗಳು ವಿಶೇಷ ಆಕರ್ಷಣೆ. ಅನಾದಿ ಕಾಲದಿಂದಲೂ ಸುತ್ತಮುತ್ತಲ ಗ್ರಾಮಗಳಿಂದ ಹುಸ್ಕೂರು ಮದ್ದೂರಮ್ಮ ಜಾತ್ರೆಯಂದು ತೇರುಗಳನ್ನು ಹೊಲಗದ್ದೆ, ಹಳ್ಳ-ಕೊಳ್ಳ ಎನ್ನದೆ ರಾಸುಗಳ ಮೂಲಕ ಎಳೆದು ತರಲಾಗುತ್ತಿತ್ತು. ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಿ ಕಣ್ತುಂಬಿಕೊಳ್ಳುತ್ತಾರೆ. ಸುಮಾರು ಹತ್ತಕ್ಕೂ ಅಧಿಕ ಗ್ರಾಮಗಳಿಂದ ಆಗಮಿಸುವ ತೇರುಗಳು (ಕುರ್ಜು), ಜಾತ್ರೆಗೆ ರಂಗು ಮೂಡಿಸುತ್ತವೆ. ಬಣ್ಣ- ಬಣ್ಣದ ತೋರಣಗಳಿಂದ ಸಿಂಗಾರಗೊಂಡು ನೂರಾರು ರಾಸುಗಳ ಸಹಾಯದಿಂದ ತೇರುಗಳನ್ನು ಹೊಲ ಗದ್ದೆಗಳಲ್ಲಿ ಎತ್ತುಗಳು ಎಳೆದು ತರುವುದನ್ನು ನೋಡುವುದೇ ಒಂದು ಸೊಗಸು. ಸುಮಾರು 100 ಅಡಿಗೂ ಅಧಿಕ ಉದ್ದದ ತೇರುಗಳನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಮಂದಿ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಐದು ದಿನ ನಡೆಯುವ ಜಾತ್ರೆಯಲ್ಲಿ ಮೊದಲು ಬೆಲ್ಲದ ದೀಪಗಳು, ದೇವರುಗಳ ಮೆರವಣಿಗೆ, ಸಿಡಿ ಸೇರಿದಂತೆ ಹತ್ತಾರು ದಾರ್ಮಿಕ ವಿಧಿ ವಿಧಾನಗಳು ಆಚರಣೆಗಳು ನಡೆಯುತ್ತವೆ.

ಶ್ರೀ ಬಿ ಕೆ ಹರಿಪ್ರಸಾದ್ ಅವರು ಇಂದು ಬೆಂಗಳೂರಿನಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದರು

Sri Vinay Guruji
Avadhootha

25 March 2022 – ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಶ್ರೀ ಬಿ ಕೆ ಹರಿಪ್ರಸಾದ್ ಅವರು ಇಂದು ಬೆಂಗಳೂರಿನಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದುಕೊಂಡರು.

ಎಂಎಸ್ಐಎಲ್ ಅಧ್ಯಕ್ಷ ಹಾಗೂ ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವಧೂತ ಶ್ರೀ ವಿನಯ್ ಗುರೂಜಿ

Guruji
Avadhootha
Sri Vinay Guruji
Sri Vinay Guruji

25 March 2022 – ಅರಮನೆ ಮೈದಾನದಲ್ಲಿ ಜರುಗಿದ, ಎಂಎಸ್ಐಎಲ್ ಅಧ್ಯಕ್ಷ ಹಾಗೂ ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವಧೂತ ಶ್ರೀ ವಿನಯ್ ಗುರೂಜಿ ಅವರು ನೂತನ ದಂಪತಿಗಳಾದ ಚೇತನ್​ ಮತ್ತು ಮೇಘನಾ ಅವರುಗಳಿಗೆ ಶುಭ ಕೋರಿ ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಭೇಟಿಯಾಗಿ ಸೌಹಾರ್ದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಬಿ ಸಿ ನಾಗೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರೂ ಹಾಜರಿದ್ದರು.

ಉಚಿತ ನೇತ್ರ ತಪಾಸಣ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು

Avadhootha
Sri Vinay Guruji
Avadhootha
Avadhootha
Sri Vinay Guruji

25 March 2022 – ಗೌರಿಗದ್ದೆ ಸ್ವರ್ಣಪೀಠಿಕಾಪುರದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಕೃಪಾಶೀರ್ವಾದದೊಂದಿಗೆ ದಿನಾಂಕ 23/03/2022ರಂದು ಚಿಕ್ಕಮಗಳೂರು ಜಿಲ್ಲೆ ಬೀರೂರಿನ ತರಳಬಾಳು ಕಲ್ಯಾಣ ಮಂಟಪದಲ್ಲಿ ಶ್ರೀ ಮಹಾತ್ಮ ಗಾಂಧೀ ಎಜುಕೇಷನಲ್ ಟ್ರಸ್ಟ್, ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಶಿವಮೊಗ್ಗದ ಶ್ರೀ ಆಶಾಜ್ಯೋತಿ ಸ್ವಯಂಪ್ರೇರಿತ ರಕ್ತ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಗ್ರಾಮೀಣ ಭಾಗದ 150ಜನರು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿರುತ್ತಾರೆ. ಶಿಬಿರದಲ್ಲಿ ಸುಮಾರು 30ಜನ ರಕ್ತದಾನ ಮಾಡಿದರು.

ಬಲಿದಾನ ದಿವಸದ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಳಗಾವಿ ಶಾಖೆ ಆಯೋಜನೆ ಮಾಡಿದ್ದ ರಂಗ್ ದೇ ಬಸಂತಿ

Vinay guruji
Vinay guruji
Vinay guruji

25 March 2022 – ಮಾರ್ಚ್ 23ರಂದು, ಬೆಳಗಾವಿ ಜೆಎನ್ಎಮ್ಸಿ ಯ ಡಾ. ಜಿರ್ಗೆ ಆಡಿಟೋರಿಯಂನಲ್ಲಿ ಬಲಿದಾನ ದಿವಸದ ಅಂಗವಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಳಗಾವಿ ಶಾಖೆ ಆಯೋಜನೆ ಮಾಡಿದ್ದ ರಂಗ್ ದೇ ಬಸಂತಿ – ದೇಶಪ್ರೇಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವನವನ್ನೇ ಬಲಿಕೊಟ್ಟು ಹೋರಾಟಕ್ಕೆ ಮತ್ತೊಂದು ರೂಪ ಕೊಟ್ಟ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿದ ದಿನದ ಸ್ಮರಣೆಯ ಅಂಗವಾಗಿ ಬಲಿದಾನ ದಿವಸವನ್ನು ಆಚರಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಜರುಗಿದ ದೇಶಪ್ರೇಮವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯ್ತು.

ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಗಳು ಹಾಗೂ ಶ್ರೀ ಗುರುನಾಥರೂಢರ ಸಮಾಧಿ ಮಂದಿರದಕ್ಕೆ ಭೇಟಿ

Sri Vinay Guruji
Avadhootha
Sri Vinay Guruji
Sri Vinay Guruji

24 March 2022 – ಅದ್ವೈತ ಸಾಮ್ರಾಟ, ಮಹಾಯೋಗಿ ಹುಬ್ಬಳ್ಳಿಯ ಶ್ರೀ ಸದ್ಗುರು ಸಿದ್ಧಾರೂಢ ಸ್ವಾಮಿಗಳು ಹಾಗೂ ಶ್ರೀ ಗುರುನಾಥರೂಢರ ಸಮಾಧಿ ಮಂದಿರದಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಭಕ್ತಾದಿಗಳಿಗೆ ಶ್ರೀ ವಿನಯ್ ಗುರೂಜಿ ಪ್ರಸಾದ ವಿತರಣೆ ಮಾಡಿದರು. ನಂತರ ಸಿದ್ಧಾರೂಢರ ಪಾದುಕೆ ದರ್ಶನ ಪಡೆದರು.

ತತ್ವಪದಗಳ ಮೂಲಕ ಅಧ್ಯಾತ್ಮಿಕ ಜಾಗೃತಿ ಮೂಡಿಸಿದ ಶಿವಯೋಗಿ ಹಾಗೂ ಶ್ರೀ ಶರೀಫರ ಗದ್ದುಗೆ ದರ್ಶನ ಪಡೆದರು

Guruji
Sri Vinay Guruji
Avadhootha
Sri Vinay Guruji
Sri Vinay Guruji
Sri Vinay Guruji
Sri Vinay Guruji
Sri Vinay Guruji

24 March 2022 – ಹಾವೇರಿ ಜಿಲ್ಲೆಯ ಶಿಗ್ಗಾವ್ ತಾಲ್ಲೂಕಿನ ಶಿಶುವಿನ ಹಾಳದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ತತ್ವಪದಗಳ ಮೂಲಕ ಅಧ್ಯಾತ್ಮಿಕ ಜಾಗೃತಿ ಮೂಡಿಸಿದ ಶಿವಯೋಗಿ ಹಾಗೂ ಶ್ರೀ ಶರೀಫರ ಗದ್ದುಗೆ ದರ್ಶನ ಪಡೆದು ಪ್ರಸಾದ ಸ್ವೀಕಾರ ಮಾಡಿದರು.
ನಂತರ ಜಾತ್ರೆ ಸಮಯದಲ್ಲಿ ಉಂಟಾಗಿದ್ದ ಪ್ಲಾಸ್ಟಿಕ್ ಕಸದ ರಾಶಿಯನ್ನು ಸ್ವಚ್ಚ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಮುಂದಿನ ರವಿವಾರ ಗುರೂಜಿ ಅವರ ಭಕ್ತರು ಹಾಗೂ ಹಲವು ಸಂಘ ಸಂಸ್ಥೆಗಳು ಉಳಿದ ಸ್ವಚ್ಛತಾ ಕಾರ್ಯ ನಡೆಸುತ್ತದೆ.

ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲ ಸಂಗಮದ ಬಸವ ಧರ್ಮ ಪೀಠದಲ್ಲಿ ಮಾರ್ಚ್ 13 ರಂದು ಜರುಗಿದ “ಲಿಂಗಾಯತ ಸಂಕಲ್ಪ ದಿವಸ”

Sri Vinay Guruji
Sri Vinay Guruji
Sri Vinay Guruji
Sri Vinay Guruji

14 March 2022 – ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲ ಸಂಗಮದ ಬಸವ ಧರ್ಮ ಪೀಠದಲ್ಲಿ ಮಾರ್ಚ್ 13 ರಂದು ಜರುಗಿದ “ಲಿಂಗಾಯತ ಸಂಕಲ್ಪ ದಿವಸ” ದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡಿದ್ದರು. ಬಾಗಲಕೋಟೆ ಜಿಲ್ಲೆಯ ಹುನುಗುಂದ ತಾಲೂಕಿನಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮ ಕ್ಷೇತ್ರವೇ ಕೂಡಲ ಸಂಗಮ. ಇಲ್ಲಿ ನದಿಯ ಮಧ್ಯದಲ್ಲಿ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳವಿದೆ ಹಾಗೂ ಸಂಗಮನಾಥ ದೇವಸ್ಥಾನವಿದೆ. ಇದೇ ಸಂಗನಾಥ ದೇವಾಲಯಕ್ಕೆ ಅವಧೂತ ಶ್ರೀ ವಿನಯ್ ಗುರೂಜಿ ಅವರು ಭೇಟಿ ನೀಡಿ ಲಿಂಗಪೂಜೆ ಮಾಡಿ ಬಿಲ್ವಪತ್ರೆ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಶ್ರೀ ವಿನಯ್ ಗುರೂಜಿ ಅವರಿಗೆ ಗೌರವ ಸಮರ್ಪಿಸಲಾಯಿತು.

ಆಶ್ರಮದಲ್ಲಿ ಆರಾಧನಾ ಮಹೋತ್ಸವ

ಮಾರ್ಚ್ 11ರ ರಾತ್ರಿ ಪುತ್ತೂರಜ್ಜ ದೇಹ ತ್ಯಾಗ ಮಾಡಿದ ದಿನ. ಅವಧೂತರ ಐವರು ಗುರುಗಳಲ್ಲಿ ಪುತ್ತೂರಜ್ಜನಿಗೆ ವಿಶೇಷ ಸ್ಥಾನ. ಇದಕ್ಕಾಗಿಯೇ ದೇಹತ್ಯಾಗ ಮಾಡಿದ ದಿನದಿಂದ 40ದಿನ ಮೊದಲು ಆಶ್ರಮದಲ್ಲಿ ಆರಾಧನಾ ಮಹೋತ್ಸವವನ್ನು ನಡೆಸಲಾಗುತ್ತದೆ. ಆರಾಧನೆಯ ಕೊನೆಯ ದಿನ ಗೌರಿಗದ್ದೆಯ ಶ್ರೀ ದತ್ತಾಶ್ರಮದಲ್ಲಿ ಭಕ್ತಿಭಾವ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಪೂಜೆ ಸಮಯದಲ್ಲೇ ಪುತ್ತೂರಜ್ಜ ಪ್ರಸಾದ ನೀಡಿದರು.

ಅವಧೂತ ಶ್ರೀ ವಿನಯ್ ಗುರೂಜಿ ಅವರ ಕನಸಿನ ಕಾರ್ಯಕ್ರಮವಾದ ಸೂರಿಲ್ಲದವರಿಗೆ ಕನಸಿನ ಮನೆ ನೀಡುವ ಕಾರ್ಯಕ್ರಮ

Sri Vinay Guruji
Sri Vinay Guruji
Sri Vinay Guruji
Sri Vinay Guruji
Sri Vinay Guruji
Sri Vinay Guruji
Sri Vinay Guruji
Sri Vinay Guruji

13 March 2022 – ಅವಧೂತ ಶ್ರೀ ವಿನಯ್ ಗುರೂಜಿ ಅವರ ಕನಸಿನ ಕಾರ್ಯಕ್ರಮವಾದ ಸೂರಿಲ್ಲದವರಿಗೆ ಕನಸಿನ ಮನೆ ನೀಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಮಾರ್ಚ್ 12 ರಂದು ಗೌರಿಗದ್ದೆ ಆಶ್ರಮದ ಹತ್ತಿರವೇ ಸೂರಿಲ್ಲದ ವೃದ್ಧ ದಂಪತಿಗೆ ಅವರ ಕನಸಿನ ಮನೆಯನ್ನು ಆಶ್ರಮದ ವತಿಯಿಂದ ಕಟ್ಟಿಕೊಡಲಾಗಿದೆ. ಇದೇ ಆರ್ಥಿಕವಾಗಿ ಹಿಂದುಳಿದ ಕೃಷ್ಣಯ್ಯ ಪೂಜಾರಿ ದಂಪತಿಗೆ ಮನೆ ಹಸ್ತಾಂತರ ಮಾಡಲಾಯಿತು. ವರ್ಷಕ್ಕೆ ಸೂರಿಲ್ಲದ ಐವರಿಗೆ ಮನೆ ನಿರ್ಮಾಣ ಮಾಡಿಕೊಡುವ ಗುರಿಯನ್ನು ಅವಧೂತರು ಹೊಂದಿದ್ದು ಅವರ ಕನಸಿಕ ಕಾರ್ಯದ ಮೊದಲ ಮನೆ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸಹ ಉಪಸ್ಥಿತರಿದ್ದರು. ಜತೆಗೆ ಸ್ಥಳೀಯ ಶಾಸಕರು ಮತ್ತು ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್, ಕಸ್ತೂರಿ ಬಾಯಿ ಸೇವಾ ಟ್ರಸ್ಟ್, ತಿರುಮಲ ಟ್ರಸ್ಟ್ ಸಹಯೋಗದಲ್ಲಿ ಈ ಕನಸಿನ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಉತ್ತರಹಳ್ಳಿ ಆಶ್ರಮದ ಧ್ಯಾನಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಬ್ಬಿ ನಿತ್ಯಾನಂದ ಗುರುಗಳ 15ನೇ ವರ್ಷದ ಆರಾಧನಾ ಮಹೋತ್ಸವ

Avadhootha
Avadhootha
Avadhootha
Avadhootha

13 March 2022 – ಅವಧೂತ ಶ್ರೀ ವಿನಯ್ ಗುರೂಜಿ ಅವರ ಸಂಕಲ್ಪದಂತೆ ಉತ್ತರಹಳ್ಳಿ ಆಶ್ರಮದ ಧ್ಯಾನಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಬ್ಬಿ ನಿತ್ಯಾನಂದ ಗುರುಗಳ 15ನೇ ವರ್ಷದ ಆರಾಧನಾ ಮಹೋತ್ಸವದ ಪ್ರಯುಕ್ತ ದಿನಾಂಕ 11/03/2022 ಸಂಜೆ 6 ಗಂಟೆಯಿಂದ ಮಧ್ಯರಾತ್ರಿ 12.20 ರವರೆಗೆ ಸಾಮೂಹಿಕವಾಗಿ ದೀಪಬೆಳಗುವ ಕಾರ್ಯಕ್ರಮ, ವಿಷ್ಣು ಸಹಸ್ರನಾಮವಳಿ, ಭಜನೆ, ರಬ್ಬಿಗಾಯಿತ್ರಿ ಜಪ, ಕಾರ್ಯಕ್ರಮವು ನೆರವೇರಿತು.
ಜತೆಗೆ 12/03/2022ರ ಬೆಳಿಗ್ಗೆ 11ಘಂಟೆಗೆ ಆಶ್ರಮದ ಗುರುಭಕ್ತರಿಂದ ವಿಷ್ಣು ಸಹಸ್ರನಾಮ ಪಾರಾಯಣ, 108 ಬಾರಿ ರಬ್ಬಿ ಗಾಯಿತ್ರಿ ಪಾರಾಯಣ ಮತ್ತು ಅನ್ನಸಂತರ್ಪಣೆಯೊಂದಿಗೆ ಈ ವರ್ಷದ 40 ದಿನದ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು.

ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ಜರುಗುತ್ತಿರುವ ರೋಟರಿ 3182 ಶಿವಮೊಗ್ಗದ 6ನೇ ಜಿಲ್ಲಾ ಸಮಾವೇಶ ರಾಮ ಸಂಭ್ರಮ 2022

11 March 2022 – ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ಜರುಗುತ್ತಿರುವ ರೋಟರಿ 3182 ಶಿವಮೊಗ್ಗದ 6ನೇ ಜಿಲ್ಲಾ ಸಮಾವೇಶ ರಾಮ ಸಂಭ್ರಮ 2022 ಕಾರ್ಯಕ್ರಮಕ್ಕೆ ಅವಧೂತ ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ಚಾಲನೆ ಸಿಕ್ಕಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ ಎಸ್ ಅರುಣ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಭಿಕರನ್ನುದ್ದೇಶಿಸಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪ್ರವಚನ ನೀಡಿದರು.

ಮತ್ತೀಕೆರೆಯ ಜೆ ಪಿ ಪಾರ್ಕ್‌ನಲ್ಲಿ ಸ್ಥಾಪನೆ ಮಾಡಿದ್ದ ಬೃಹತ್ ಶಿವನ‌ ಮೂರ್ತಿಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.

03 March 2022 – ಮಹಾಶಿವರಾತ್ರಿ ಪ್ರಯುಕ್ತ ಮಾರ್ಚ್ 2ರಂದು ಮತ್ತೀಕೆರೆಯ ಜೆ ಪಿ ಪಾರ್ಕ್‌ನಲ್ಲಿ ಸ್ಥಾಪನೆ ಮಾಡಿದ್ದ ಬೃಹತ್ ಶಿವನ‌ ಮೂರ್ತಿಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ತೋಟಗಾರಿಕೆ‌ ಸಚಿವ ಶ್ರೀ ಮುನಿರತ್ನ ಅವರು ಇದೇ ಸಂದರ್ಭದಲ್ಲಿ ತಮ್ಮ ಕ್ಷೇತ್ರದ 1000 ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದರು. ಈ‌ ಕಾರ್ಯಕ್ರಮಕ್ಕೆ ಅವಧೂತ ಶ್ರೀ ವಿನಯ್ ಗುರೂಜೀ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಸಾಧಕರಿಗೆ ಸನ್ಮಾನ ಮಾಡಿ ಆಶೀರ್ವದಿಸಿದರು.

ಭಕ್ತರಿಗೆ ಮಜ್ಜಿಗೆ ನೀರು ವಿತರಣೆಯ ಸೇವೆ ಮಾಡಲಾಯಿತು.

02 March 2022 – ಅದ್ವೈತ ಸಾಮ್ರಾಟ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವಿನಯ್ ಗುರೂಜಿ ದತ್ತಾಶ್ರಮ ಶ್ರೀ ಸ್ವರ್ಣ ಪೀಠಿಕಾಪುರ ವತಿಯಿಂದ ಭಕ್ತರಿಗೆ ಮಜ್ಜಿಗೆ ನೀರು ವಿತರಣೆಯ ಸೇವೆ ಮಾಡಲಾಯಿತು. ಬಿಸಿಲಲ್ಲಿ ಬನವಳಿದ ಜನತೆ ತಂಪಾದ ಮಜ್ಜಿಗೆ ಕುಡಿದರು.

ಗೌರಿಗದ್ದೆಯ ದತ್ತಾಶ್ರಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

01 March 2022 – ಗೌರಿಗದ್ದೆಯ ದತ್ತಾಶ್ರಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಶ್ರಮದಲ್ಲಿ ಕೈಲಾಸವಾಸಿ ಶಿವನ ಪ್ರತಿರೂಪವನ್ನು ಸೃಷ್ಟಿಸಲಾಗಿತ್ತು. ಅವಧೂತರ ಸಾರಥ್ಯದಲ್ಲಿ ವಿಶೇಷ ಲಿಂಗಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ವತಃ ಶ್ರೀ ವಿನಯ್ ಗುರೂಜಿ ಅವರು ನೀರು, ಹಾಲು, ಎಳನೀರ ಅಭಿಷೇಕ ಹಾಗೂ ಬಿಲ್ವಾರ್ಚನೆಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ತಾಯಿ ಪ್ರಸಾದ ನೀಡಿ ಆಶೀರ್ವದಿಸಿದರು. ಇನ್ನು ಆಶ್ರಮದ ಆವರಣದಲ್ಲಿ ಇರುವ ಲಿಂಗಕ್ಕೆ ಅವಧೂತರು ಎಳನೀರು, ಹಾಲು, ಮೊಸರು, ಕುಂಕುಮನೀರಿನಲ್ಲಿ ಅಭಿಷೇಕ ನೆರವೇರಿಸಿದರು. ಅಭಿಷೇಕದ ನಂತರ ಅರಿಶಿನ ಕುಂಕುಮ, ವಿಭೂತಿ ಅರ್ಪಿಸಿ ಬಿಲ್ವಾರ್ಚನೆ ಮಾಡಲಾಯ್ತು. ಭಕ್ತರಿಂದ ರುದ್ರಪಾರಾಯಣ ಮತ್ತು ಶಿವಸಹಸ್ರನಾಮ ಪಾರಾಯಣ ಕೂಡ ಜರುಗಿತು.

ಮಹಾಶಿವರಾತ್ರಿ ಪ್ರಯುಕ್ತ ಉತ್ತರಹಳ್ಳಿಯ ಅವಧೂತ ಶ್ರೀ ವಿನಯ್ ಗುರೂಜಿ ಆಶ್ರಮದಲ್ಲಿ ಬೆಳಗಿನಿಂದಲೇ ಶಿವಲಿಂಗ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.

01 March 2022 – ಮಹಾಶಿವರಾತ್ರಿ ಪ್ರಯುಕ್ತ ಉತ್ತರಹಳ್ಳಿಯ ಅವಧೂತ ಶ್ರೀ ವಿನಯ್ ಗುರೂಜಿ ಆಶ್ರಮದಲ್ಲಿ ಬೆಳಗಿನಿಂದಲೇ ಶಿವಲಿಂಗ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಿವಸಹ್ರಸನಾಮ ಹಾಗೂ ರುದ್ರ ಪಾರಾಯಣ ಜತೆಗೆ ಆಶ್ರಮದಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವಲಿಂಗಕ್ಕೆ ಬಿಲ್ವಾರ್ಚನೆ, ನೀರು, ಹಾಲು ಹಾಗೂ ಎಳನೀರ ಅಭಿಷೇಕ ಮಾಡಲಾಯ್ತು. ಆಶ್ರಮಕ್ಕೆ ಬಂದ ಭಕ್ತಾದಿಗಳು ಸಹ ಅಭಿಷೇಕ ಮಾಡಿ ಶಿವನ ಆಶೀರ್ವಾದ ಪಡೆದುಕೊಂಡರು. ಸಂಜೆಯವರೆಗೂ ಅಭಿಷೇಕ ಮತ್ತು ರುದ್ರ ಪಾರಾಯಣ ಕಾರ್ಯಕ್ರಮ ಜರುಗಲಿದೆ.

"ಅಕ್ಷರ ಮಿತ್ರ" ಸಂಘದ 13ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡು‌ ಶುಭ ಹಾರೈಸಿದರು.

27 Feb 2022 – “ಅಕ್ಷರ ಮಿತ್ರ” ಸಂಘದ 13ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡು‌ ಶುಭ ಹಾರೈಸಿದರು. ಶೃಂಗೇರಿಯ ಪ್ರಾಣೇಶ್ ಕೂಳೆಗದ್ದೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ನೃತ್ಯ ನಮನ ಹಾಗೂ ಸರಿಗಮಪ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿಕೊಡಲಾಯ್ತು. ಕಾರ್ಯಕ್ರಮದಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಆರೋಗ್ಯ ತಪಾಸಣೆ, ನೇತ್ರದಾನ ನೋಂದಣಿ ಮತ್ತು ಕೊರೊನಾ ವಾರಿಯರ್ಸ್ ಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾನ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ‌ ಜೀವರಾಜ್ ಸೇರಿ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ

Sri Vinay Guruji
Sri Vinay Guruji

26 Feb 2022 – ಕ್ಷತ್ರಿಯ ಮರಾಠ ಸಮಾಜ ಮತ್ತು ತೀರ್ಥಹಳ್ಳಿಯ ಸಮಸ್ತ ಹಿಂದೂ ಬಾಂಧವರು ಜಂಟಿಯಾಗಿ ಆಯೋಜಿಸಿದ್ದ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಭಾಗಿಯಾಗಿದ್ದರು. ಶಾಂತಿಗೆ ಹೆಸರಾದ ಕುವೆಂಪು ಹುಟ್ಟಿದ ತೀರ್ಥಹಳ್ಳಿಯಲ್ಲಿ ಜರುಗಿದ ಈ ಕಾರ್ಯಕ್ರಮ ಸಾಮರಸ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಗೌರಿಗದ್ದೆಯ ದತ್ತಾಶ್ರಮದ ಅವಧೂತ ಶ್ರೀ ವಿನಯ್ ಗುರೂಜಿ ಅವರು “ನಮ್ಮ ಪ್ರಧಾನಿ ಮೋದಿ ಜೀವಂತ ಶಿವಾಜಿ. ಶಿವ ಅಂದ್ರೆ ಭಯ ಇಲ್ಲದವನು. ಭಯ ಇಲ್ಲದವನು ಮಾತ್ರ ಇಷ್ಟೆಲ್ಲಾ ಕೆಲಸ ಮಾಡಲು ಆಗೋದು. ಆಧ್ಯಾತ್ಮದಲ್ಲಿ ಸನ್ಯಾಸಿಗೆ ಭಯ ಇರಬಾರದು. ನಮ್ಮನ್ನ ಕಾಡ್ತಿರೋದು ಭಯ. ಮೊನ್ನೆ ನಡೆದ ಹರ್ಷ ಕೊಲೆ ಕೇಸ್ ಅಲ್ಲೂ ಆತನನ್ನು ಕಾಪಾಡಲು ನಮ್ಮ ಹುಡುಗರಿಗೆ ಆಗಿದ್ದೂ ಕೂಡ ಭಯವೇ. ಭಯವನ್ನು ನಮ್ಮ ಹುಡುಗರ ಮನಸ್ಸಿಂದ ಹೋಗಲಾಡಿಸಬೇಕು. ತ್ಯಾಗದಿಂದ ನಮ್ಮ ಭಾರತ ಆಗಿದ್ದು. ಭಾವನೆಯಿಂದ ಆದ ರಥ ಭಾರತ. ನಮ್ಮ ದೇಶ – ಧರ್ಮ ನಿಂತಿರೋದು ಭಾವನೆಯಿಂದ” ಎಂದು ಹಿಂದೂ ಸಭಿಕರಿಗೆ ಹೇಳಿದರು.

ಬಿಜಿಎಸ್ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ

07 Feb 2022 – ಪೂಜಾ ಕಾರ್ಯಕ್ರಮದ ನಂತರ ಬಿಜಿಎಸ್ ಸಮೂಹ ಸಂಸ್ಥೆಗಳ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಬಿಜಿಎಸ್ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಹಾಗೂ ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ಉಪಸ್ಥಿತರಿದ್ದರು. ಬೃಹತ್ ಗಾತ್ರದ ಕೇಕ್ ಕತ್ತರಿಸಿ ಸ್ವಾಮೀಜಿಗಳಿಗೆ ತಿನ್ನಿಸುವುದರ ಮೂಲಕ ಶ್ರೀ ಶ್ರೀ ಪ್ರಕಾಶ್ ನಾಥ್ ಸ್ವಾಮೀಜಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಫಿಡಿಲಿಟಸ್ ಗ್ಯಾಲರಿ ಪ್ರಮುಖ ಚಿತ್ರಕಾರ ಕೋಟೆಗದ್ದ ರವಿ ರಚಿಸಿದ್ದ ಪರಮಪೂಜ್ಯ ಶಿವೈಕ್ಯ ಬಾಲಗಂಗಾಧನನಾಥ ಸ್ವಾಮೀಜಿ ಅವರ ಪೇಂಟಿಂಗ್ ಅನ್ನು ಅವಧೂತ ಶ್ರೀ ವಿನಯ್ ಗುರೂಜಿ ಅವರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿ ಅವರಿಗೆ ಕೊಟ್ಟು ಶುಭ ಹಾರೈಸಿದರು. ಇದಕ್ಕೂ ಮೊದಲು ಬಾಲಗಂಗಾಧನನಾಥ ಸ್ವಾಮೀಜಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು

ಶ್ರೀ ಶ್ರೀ ಪ್ರಕಾಶ್ ನಾಥ್ ಸ್ವಾಮೀಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ಬಿಜಿಎಸ್ ನಾಲೆಜ್ಡ್ ಸಿಟಿಗೆ ಭೇಟಿ ನೀಡಿ ಅಭಿನಂದಿಸಿದರು.

Avadhootha
Avadhootha

07 Feb 2022 – ಬಿಜಿಎಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶ್ರೀ ಪ್ರಕಾಶ್ ನಾಥ್ ಸ್ವಾಮೀಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ಬಿಜಿಎಸ್ ನಾಲೆಜ್ಡ್ ಸಿಟಿಗೆ ಭೇಟಿ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಲಿಂಗಪೂಜೆ ಮಾಡಿದರು. ಶ್ರೀ ಶ್ರೀ ಪ್ರಕಾಶ್ ನಾಥ್ ಸ್ವಾಮೀಜಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಹೋಮವನ್ನು ಆಯೋಜನೆ ಮಾಡಲಾಗಿತ್ತು.

ಬ್ರಿಲಿಯಂಟ್ ಪ್ರಿಂಟರ್ಸ್ ಕಚೇರಿ ಹಾಗೂ ಮುದ್ರಣಾಲಯಕ್ಕೆ ಭೇಟಿ ನೀಡಿದ

07 Feb 2022 – ಅವಧೂತ ಶ್ರೀ ವಿನಯ್ ಗುರೂಜಿ ಅವರು ಬೆಂಗಳೂರು ಹೊರವಲಯ ನೆಲಮಂಗಲದ ಬಳಿ ಇರುವ ಬ್ರಿಲಿಯಂಟ್ ಪ್ರಿಂಟರ್ಸ್ ಕಚೇರಿ ಹಾಗೂ ಮುದ್ರಣಾಲಯಕ್ಕೆ ಭೇಟಿ ನೀಡಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನಿಲ್ ರೆಗೋ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಕ್ರಿಶ್ಚಿಯನ್ ಮೋರ್ಚಾ ನಿಗಮ ಮಂಡಳಿ ಅಧ್ಯಕ್ಷರಾದ ಜೋಲಸ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುದ್ರಣಾಲಯದ ಕಾರ್ಮಿಕರನ್ನುದ್ದೇಶಿಸಿ ಶ್ರೀ ವಿನಯ್ ಗುರೂಜಿ ಅವರು ಮಾತನಾಡಿ ಆಶೀರ್ವದಿಸಿದರು.

ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಮನೆಗೆ ಅವಧೂತ ಶ್ರೀ ವಿನಯ್ ಗುರೂಜಿ ಅವರು ಭೇಟಿ ನೀಡಿದ್ದರು

02 Feb 2022 – ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಮನೆಗೆ ಅವಧೂತ ಶ್ರೀ ವಿನಯ್ ಗುರೂಜಿ ಅವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಅವರ ಪತ್ನಿ ಉಷಾ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಹಾಗೂ ಸಿದ್ಧಾರ್ಥ್ ಮಗ ಅಮರ್ತ್ಯ ಮತ್ತು ಶಿವಕುಮಾರ್ ಮಗಳು ಐಶ್ವರ್ಯ ಸಹ ಉಪಸ್ಥಿತರಿದ್ದರು. ದಿವಂಗತ ಸಿದ್ಧಾರ್ಥ್ ರ ಮೂಡಿಗೆರೆಯಲ್ಲಿರುವ ಮನೆಗೆ ಭೇಟಿ ನೀಡಿದ ಅವಧೂತರು ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಕೋಟೆಗದ್ದೆ ರವಿ ರಚಿಸಿದ ಕಲಾಕೃತಿಯನ್ನು ಅವಧೂತ ಶ್ರೀ ವಿನಯ್ ಗುರೂಜಿ ಅವರು ಅಮರ್ತ್ಯ-ಐಶ್ವರ್ಯ ದಂಪತಿಗೆ ನೀಡಿ ಆಶೀರ್ವದಿಸಿದರು. ಡಿ ಕೆ ಶಿವಕುಮಾರ್ ಗೆ ಅವಧೂತರು ಸಿಹಿ ತಿನ್ನಿಸಿ ಹಾರೈಸಿದರು. ಈ ಸಂದರ್ಭದಲ್ಲಿ ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಅಚ್ಚುತ್ ಗೌಡ ಅವರು ಸಹ ಉಪಸ್ಥಿತರಿದ್ದರು.

73ನೇ ಗಣರಾಜ್ಯೋತ್ಸವ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ದಿನಪೂರ್ತಿ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

26 Jan 2022 – 73ನೇ ಗಣರಾಜ್ಯೋತ್ಸವ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ದಿನಪೂರ್ತಿ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಚಿಕ್ಕಮಗಳೂರು ಗೌರಿ ಗದ್ದೆ ಆಶ್ರಮದ ಸಮೀಪ ಇರುವ ಹರಿಹರಪುರದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಿದ ಅವಧೂತರು ಧ್ವಜಾರೋಹಣ, ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ಸ್ಯಾನಿಟೈಜ್ ದ್ರಾವಣವನ್ನು ಸಿಂಪಡಣೆ ಮಾಡಿ ಕೊರೋನಾ ಮುಕ್ತ ಸಮಾಜಕ್ಕೆ ನಾಂದಿ ಹಾಡಿದರು.

ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಉಡುಪಿ ಜಿಲ್ಲೆ ಮಲ್ಪೆಯ ಅಯ್ಯಪ್ಪ ವೃತ್ತದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಜರುಗಿದ 42 ನೇ ವರ್ಷದ ಮಹಾಪೂಜೆ

06 Jan 2022 – ಉಡುಪಿ ಜಿಲ್ಲೆ ಮಲ್ಪೆಯ ಅಯ್ಯಪ್ಪ ವೃತ್ತದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಜರುಗಿದ 42 ನೇ ವರ್ಷದ ಮಹಾಪೂಜೆ, ಬ್ರಹ್ಮ ಕಳಶೋತ್ಸವ ಮತ್ತು ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡಿದ್ದರು. ಶ್ರೀ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆ ಮತ್ತು ಭಜನೆಯಲ್ಲಿ ಭಾಗಿಯಾಗಿದ್ದ ಅವಧೂತರು ಅಯ್ಯಪ್ಪ ಮಾಲಾಧಾರಿಗಳು ಊಟ ಮಾಡಿದ ಎಲೆಗಳನ್ನು ಎತ್ತುವ ಮೂಲಕ ಸೇವೆಯಲ್ಲಿ ಭಾಗಿಯಾದರು. ಕಾರ್ಯಕ್ರಮದಲ್ಲಿ ಶ್ಯಾಮಿಲಿ ಟ್ರಸ್ಟ್ ನ ಪ್ರವರ್ತಕರಾದ ನಾಡೋಜ ಡಾ ಜಿ ಶಂಕರ್, ಉಡುಪಿ ಶಾಸಕ ಕೆ ರಘುಪತಿ ಭಟ್, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಬ್ರಹ್ಮ ಕಳಶೋತ್ಸವ ಸಮಿತಿ ಅಧ್ಯಕ್ಷರಾದ ಹರಿಯಪ್ಪ ಕೊಟ್ಯಾನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು

2022 ರ ಹೊಸ ವರ್ಷಾಚರಣೆ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ಬಿಜಿಎಸ್ ಸಮೂಹ ಸಂಸ್ಥೆಗಳಿಗೆ ಭೇಟಿ ನೀಡಿದರು

04 Jan 2022 – 2022 ರ ಹೊಸ ವರ್ಷಾಚರಣೆ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ಬಿಜಿಎಸ್ ಸಮೂಹ ಸಂಸ್ಥೆಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿಜಿಎಸ್ ಸಮೂಹ ಸಂಸ್ಥೆಗಳ ಸಿಬ್ಬಂದಿಗಳು ಅವಧೂತರಿಗೆ ಆರತಿ ಬೆಳಗಿ ಸ್ವಾಗತ ಕೋರಿದರು. ಅವಧೂತ ಶ್ರೀ ವಿನ ಗುರೂಜಿ ಅವರು ಬಿಜಿಎಸ್ ಸಮೂಹ ಸಂಸ್ಥೆಗಳ ಎಂಡಿ ಶ್ರೀ ಪ್ರಕಾಶ್ ನಾಥ ಸ್ವಾಮೀಜಿ ಅವರೊಂದಿಗೆ ಶಿವೈಕ್ಯರಾಗಿರುವ ಶ್ರೀ ಶ್ರೀ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಪೂಜೆ ಮಾಡಿದರು. ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಕೇಕ್ ಕಟ್ ಮಾಡಿದ ಅವಧೂತರು ಶ್ರೀ ಪ್ರಕಾಶ್ ನಾಥ ಸ್ವಾಮೀಜಿ ಅವರಿಗೆ ಕೇಕ್ ತಿನ್ನಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಶ್ರೀ ವಿನಯ್ ಗುರೂಜಿ ಮತ್ತು ಶ್ರೀ ಪ್ರಕಾಶ್ ನಾಥ ಸ್ವಾಮೀಜಿ ಅವರಿಗೆ ಜಿಜಿಎಸ್ ಸಿಬ್ಬಂದಿಗಳು ಸನ್ಮಾನ ಮಾಡಿ ಆಶೀರ್ವಾದ ಪಡೆದರು. ಇದಾದ ನಂತರ ಅವಧೂತರು ಬಿಜಿಎಸ್ ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ ಸಂದೀಪ್ ಅವರ ಮನೆಯಲ್ಲಿ ಜರುಗಿದ ವಿಶೇಷ ಅಯ್ಯಪ್ಪ ಸ್ವಾಮಿ ಪೂಜೆ ಮತ್ತು ಭಜನೆ ಕಾರ್ಯಕ್ರಮ

04 Jan 2022 – ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ ಸಂದೀಪ್ ಅವರ ಮನೆಯಲ್ಲಿ ಜರುಗಿದ ವಿಶೇಷ ಅಯ್ಯಪ್ಪ ಸ್ವಾಮಿ ಪೂಜೆ ಮತ್ತು ಭಜನೆ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡಿದ್ದರು. ಹಳೇ ಮಡಿವಾಳದ ಜೈ ಭೀಮ್ ನಗರದಲ್ಲಿರುವ ಡಾ ಸಂದೀಪ್ ಅವರ ಸ್ವಗೃಹದಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮತ್ತು ಭಜನೆ ಹಮ್ಮಿಕೊಳ್ಳಲಾಗಿತ್ತು. ಸ್ವತಃ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿರುವ ಡಾ. ಸಂದೀಪ್ ಅವರು ಅವಧೂತ ಶ್ರೀ ವಿನಯ್ ಗುರೂಜಿ ಮತ್ತು ಗುರುಸ್ವಾಮಿಗಳ ಆಶೀರ್ವಾದ ಪಡೆದರು. ಭಕ್ತಿ ಭಾವದಿಂದ ಜರುಗಿದ ಭಜನೆ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಮುನಿಸ್ವಾಮಿ, ಕಂದಾಯ ಸಚಿವ ಆರ್ ಅಶೋಕ್, ಚಾಮರಾಜ ನಗರ ಶಾಸಕ ಸುರೇಶ್, ಸಹ ಭಜನೆಯಲ್ಲಿ ಭಾಗಿಯಾಗಿದ್ದರು. ಮಹಾತ್ಮಾ ಗಾಂಧಿ ಟ್ರಸ್ಟ್ ನ ಮುಖ್ಯ ಟ್ರಸ್ಟೀ ಶ್ರೀ ಅಚ್ಚುತ್ ಗೌಡ ಅವರೂ ಸಹ ವಿಶೇಷ ಪೂಜೆ ಮತ್ತು ಭಜನೆಯಲ್ಲಿ ಭಾಗಿಯಾಗಿದ್ದರು.

ಅವಧೂತ ಶ್ರೀ ವಿನಯ್ ಗುರೂಜಿ ಅವರು ಇಂದು ತಮಿಳುನಾಡು ವೆಲ್ಲೂರಿನ ಶ್ರೀ ಲಕ್ಷ್ಮಿ ನಾರಾಯಣಿ ದೈವ ಸನ್ನಿಧಿಗೆ ಭೇಟಿ ನೀಡಿದರು

03 Jan  2022 – ಅವಧೂತ ಶ್ರೀ ವಿನಯ್ ಗುರೂಜಿ ಅವರು ಇಂದು ತಮಿಳುನಾಡು ವೆಲ್ಲೂರಿನ ಶ್ರೀ ಲಕ್ಷ್ಮಿ ನಾರಾಯಣಿ ದೈವ ಸನ್ನಿಧಿಗೆ ಭೇಟಿ ನೀಡಿದರು. ಈ ಸಂದರ್ಭ ದಲ್ಲಿ ಓಂ ನಮೋ ನಾರಾಯಣೀ ಪೀಠದ ಶ್ರೀ ಶಕ್ತಿ ಅಮ್ಮನವರ 46ನೇ ಜಯಂತಿಯಲ್ಲಿ ಭಾಗಿಯಾಗಿದ್ದರು. ವಿಜೃಂಭಣೆಯಿಂದ ಜರುಗಿದ ಜಯಂತಿಯಲ್ಲಿ ಸಾವಿರಾರು ಜನರು, ಭಕ್ತರು ಮತ್ತು ಅನುಯಾಯಿಗಳು ಪಾಲ್ಗೊಂಡು ಆಶೀರ್ವಾದ ಪಡೆದುಕೊಂಡರು. ಅವಧೂತ ಶ್ರೀ ವಿನಯ್ ಗುರೂಜಿ ಅವರೂ ಸಹ ಶ್ರೀ ಪುರಂ ಪೀಠಕ್ಕೆ ಭೇಟಿ‌ ನೀಡಿ ಅಮ್ಮನವರಿಗೆ ಜಯಂತಿಯ ನಮನ ಸಲ್ಲಿಸಿ ಆಶೀರ್ವಚನ ಪಡೆದರು. ಇದೇ ಸಂದರ್ಭದಲ್ಲಿ ಬಿಜಿಎಸ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ನಾಥ ಸ್ವಾಮೀಜಿ ಹಾಗೂ ಮಹಾತ್ಮಾ ಗಾಂಧಿ ಟ್ರಸ್ಟ್ ನ ಮುಖ್ಯ ಟ್ರಸ್ಟೀ ಶ್ರೀ ಅಚ್ಚುತ್ ಗೌಡರು ಹಾಗೂ ಕಾರ್ಯದರ್ಶಿ ಶ್ರೀ ಶಿವರಾಜ್ ಗೌಡರು ಉಪಸ್ಥಿತರಿದ್ದರು.

"ಆಸೆಗಳ ಹೊತ್ತ ಎತ್ತಿನ ಬಂಡಿ" ಎಂಬ ಕೃತಿಯನ್ನು ತಮ್ಮ ಆಶೀರ್ವಚನಗಳನ್ನು ನೀಡಿ ಬಿಡುಗಡೆಗೊಳಿಸಿದರು

02 Jan 2022 – ಹೊಸ ವರ್ಷದ ಹೊಸ್ತಿಲಲ್ಲಿ ಇಂದು ಅವಧೂತ ಶ್ರೀ ವಿನಯ ಗುರೂಜಿ ಅವರ ಸಾನಿಧ್ಯದಲ್ಲಿ ಚಿಕ್ಕಮಗಳೂರಿನ ಗೌರಗದ್ದೆಯಲ್ಲಿರುವ ಸ್ವರ್ಣ ಪೀಠಿಕ ಆಶ್ರಮದಲ್ಲಿ ಲೇಖಕರಾದ ಡಿ ಪಿ ಮಂಜುನಾಥ ಪಟೇಲ್ ದಾನಿಹಳ್ಳಿ ರಚಿಸಿರುವ “ಆಸೆಗಳ ಹೊತ್ತ ಎತ್ತಿನ ಬಂಡಿ” ಎಂಬ ಕೃತಿಯನ್ನು ತಮ್ಮ ಆಶೀರ್ವಚನಗಳನ್ನು ನೀಡಿ ಬಿಡುಗಡೆಗೊಳಿಸಿದರು. ಇದೇ ಶುಭಗಳಿಗೆಯಲ್ಲಿ ಮಾಲತೇಶ್ ಸಿಗಸೆ ಹಾಗೂ ಬಿ ಎನ್ ಸಂದೀಪ್ ಅವರು ಉಪಸ್ಥಿತರಿದ್ದರು.

ಬಹು ಧಾರ್ಮಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡಿದ್ದರು.

27 Dec 2021 – ಝಾರಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಂಗಳೂರಿನ ಗಂಜಿಮಠದಲ್ಲಿ ಇಂದು ಜರುಗಿಸಲಾದ ಬಹು ಧಾರ್ಮಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹಲವು ಧಾರ್ಮಿಕ ಮುಖಂಡರು ಮತ್ತು ರಾಜಕೀಯ ಮುಖಂಡರೂ ಭಾಗವಹಿಸಿದ್ದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 15 ಜೋಡಿ ಸತಿ-ಪತಿಗಳಾದವರಿಗೆ ಅವಧೂತ ಶ್ರೀ ವಿನಯ್ ಗುರೂಜಿ ಅವರು ಆಶೀರ್ವಾದ ಮಾಡಿದರು.

ಚಕ್ರವರ್ತಿ ಸೂಲಿಬೆಲೆ ಇಂದು ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು

17 Dec 2021 – ಯುವ ಬ್ರಿಗೇಡ್ ಸ್ಥಾಪಕ ಮತ್ತು ಖ್ಯಾತ ಬರಹಗಾರ ಚಕ್ರವರ್ತಿ ಸೂಲಿಬೆಲೆ ಇಂದು ಚಿಕ್ಕಮಗಳೂರಿನ ಗೌರಿ ಗದ್ದೆ ಆಶ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಶ್ರೀ ವಿನಯ್ ಗುರೂಜಿ ಅವರು ನೆರವೇರಿಸಿದ ವಿಶೇಷ_ಪೂಜೆಯ ಸಂದರ್ಭದಲ್ಲಿ ದೇವಿ ಪ್ರಸಾದ ನೀಡಿ ಆಶೀರ್ವಾದಿಸಿದರು.

ನೂತನ ಆಂಬ್ಯುಲೆನ್ಸ್‌ ಅನ್ನು ಅವಧೂತ ಶ್ರೀ ವಿನಯ್‌ ಗುರೂಜಿ ಅವರು ಡ್ರೈವಿಂಗ್‌ ಮಾಡುವ ಮೂಲಕ ಚಾಲನೆಯನ್ನು ನೀಡಿದರು.

13 Dec 2021 – ಅವಧೂತ ಶ್ರೀ ವಿನಯ್‌ ಗುರೂಜಿ ಅವರು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಯುವತೇಜಸ್ಸು ಸಂಘದ ವತಿಯಿಂದ ಲೋಕಾರ್ಪಣೆ ಮಾಡಿದ ನೂತನ ಆಂಬ್ಯುಲೆನ್ಸ್‌ ಅನ್ನು ಅವಧೂತ ಶ್ರೀ ವಿನಯ್‌ ಗುರೂಜಿ ಅವರು ಡ್ರೈವಿಂಗ್‌ ಮಾಡುವ ಮೂಲಕ ಚಾಲನೆಯನ್ನು ನೀಡಿದರು. ಈ ಆಂಬ್ಯುಲೆನ್ಸ್ ಅನ್ನು ಉಚಿತವಾಗಿ ಬಳಕೆ ಮಾಡಿಕೊಡಲು ಸಂಘವು ಸಾರ್ವಜನಿಕರಿಗೆ ಕೊಡುಗೆಯಾಗಿ ಕೊಟ್ಟಿದೆ.

ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಗಳು ಅವರನ್ನು ಭೇಟಿ ಮಾಡಿ ಫಲವನ್ನು ನೀಡಿ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು

13 Dec 2021 – ಅವಧೂತ ಶ್ರೀ ವಿನಯ್‌ ಗುರೂಜಿ ಅವರು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ , ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ರಥ ಪೂಜೆಯಲ್ಲಿ ಪಾಲ್ಗೊಂಡ ನಂತರ, ಕ್ಷೇತ್ರದ ಗುರುಗಳಾದಂತಹ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಗಳು ಅವರನ್ನು ಭೇಟಿ ಮಾಡಿ ಫಲವನ್ನು ನೀಡಿ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು ಮತ್ತು ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಗಳು ಅವರಿಂದ ಆಶೀರ್ವಾಚನವನ್ನು ಸ್ವೀಕರಿಸಿದರು.

ಸ್ವಚ್ಚತಾ ಕಾರ್ಯಕ್ರಮವನ್ನು ಡಿಸೆಂಬರ್೧೧, ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು

13 Dec 2021 – ಅವಧೂತ ಶ್ರೀ ವಿನಯ್ ಗುರೂಜಿ ಮತ್ತು ಜಿಲ್ಲಾಡಳಿತಾದ ಸಾರಥ್ಯದಲ್ಲಿ ಶ್ರೀ ದತ್ತಪೀಠದ ಕೈಮರದಿಂದ ಮಾಣಿಕ್ಯಧಾರವರೆಗಿನ ಸುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಡಿಸೆಂಬರ್೧೧, ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು. ವಿನಯ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಆಶ್ರಮದ ಕಾರ್ಯಕರ್ತರೊಂದಿಗೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು, NCC ಕ್ಯಾಡೆಟ್ ಗಳು, ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಲಾಯಿತು.

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಮತ್ತು ರಥ ಪೂಜೆಯಲ್ಲಿ ಪಾಲ್ಗೊಂಡು, ದೇವರ ದರ್ಶನವನ್ನು ಪಡೆದರು.

11 Dec 2021 – ಅವಧೂತ ಶ್ರೀ ವಿನಯ್ ಗುರೂಜಿ ಅವರು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ರಥ ಪೂಜೆಯಲ್ಲಿ ಪಾಲ್ಗೊಂಡು, ದೇವರ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರೊಂದಿಗೆ, ದೇವಾಲಯದ ಆಡಳಿತ ಮಂಡಳಿಯವರು, ಕಾರ್ಯ ನಿರ್ವಹಣಾಧಿಕಾರಿಗಳು, ದೇವಸ್ಥಾನದ ಸಿಬ್ಬಂದಿಗಳು, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹೆಚ್ ಆರ್‌ ರಂಗನಾಥ್ ಅವರ ಪುತ್ರಿ ಪಯಸ್ವಿನಿ ರಂಗನಾಥ್ ಹಾಗೂ ನಿಖಿಲ್ ಭಾಸ್ಕರ್ ಅವರ ಅರತಕ್ಷತೆಯಲ್ಲಿ ಪಾಲ್ಗೊಂಡು ನವ ವಿವಾಹಿತ ಜೋಡಿಗೆ ಆಶೀರ್ವಚನ ನೀಡಿದರು.

05 Dec 2021 – ಇಂದು ಅವಧೂತ ಶ್ರೀ ವಿನಯ್‌ ಗುರೂಜಿ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಿದ ಪಬ್ಲಿಕ್‌ ಟಿವಿ ಸುದ್ದಿವಾಹಿನಿಯ ಮುಖ್ಯಸ್ಥರಾದ ಹೆಚ್ ಆರ್‌ ರಂಗನಾಥ್ ಅವರ ಪುತ್ರಿ ಪಯಸ್ವಿನಿ ರಂಗನಾಥ್ ಹಾಗೂ ನಿಖಿಲ್ ಭಾಸ್ಕರ್ ಅವರ ಅರತಕ್ಷತೆಯಲ್ಲಿ ಪಾಲ್ಗೊಂಡು ನವ ವಿವಾಹಿತ ಜೋಡಿಗೆ ಆಶೀರ್ವಚನ ನೀಡಿದರು.

ವೀರಕೇಸರಿ ಸಂಘ ಆಚರಣೆ ಮಾಡಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡಿದ್ದರು.

22 Nov 2021 – ಚಿಕ್ಕಮಗಳೂರಿನ ಬೊಗಸೆ ಬಿಳಗೊಳದ ವೀರಕೇಸರಿ ಸಂಘ ಆಚರಣೆ ಮಾಡಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪರಿಸರ ಕಾಳಜಿ ತೋರಿದ ಅವಧೂತರು ಬಿಲ್ವಪತ್ರೆ ಗಿಡ ನೆಟ್ಟು ಇತರರಿಗೂ ಪರಿಸರ ಜಾಗೃತಿ ಮೂಡಿಸಿದರು. ಕಾರ್ತಿಕ ಮಾಸದ ವಿಶೇಷ ಸಂದರ್ಭದಲ್ಲಿ ನೆಟ್ಟ ಬಿಲ್ವಪತ್ರೆ ಗಿಡ ಒಂದು ಶಿವಲಿಂಗ ಸ್ಥಾಪನೆಗೆ ಸಮ ಎಂದು ಹೇಳಿದರು. ಈ ಸಮಯದಲ್ಲಿ ವೀರಕೇಸರಿ ಸಂಘದ ಮುಖ್ಯಸ್ಥರು ಹಾಜರಿದ್ದರು.

ಬಾಳೆಹೊನ್ನೂರಿನ ರಂಬಾಪುರಿ ಮಠಕ್ಕೆ ಭೇಟಿ

21 Nov 2021 – ಇಂದು ಅವಧೂತ ಶ್ರೀ ವಿನಯ್ ಗುರೂಜಿ ಅವರು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಬಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಮದ್ ರಂಬಾಪುರಿ ಜಗದ್ಗುರು ಅವರೊಂದಿಗೆ ಸೌಹಾರ್ದ ಮಾತುಕತೆ ನಡೆಸಿ ಆಶೀರ್ವಚನ ಪಡೆದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕದ ಹೆಮ್ಮೆಯ ಉದ್ಯಮಿ ಶ್ರೀ ವಿಜಯ ಸಂಕೇಶ್ವರ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು

17 Nov 2021 – ಹುಬ್ಬಳ್ಳಿ ಪ್ರವಾಸದಲ್ಲಿರುವ ಅವಧೂತ ಶ್ರೀ ವಿನಯ್ ಗುರೂಜಿ ಅವರು ಇಂದು ಬೆಳಿಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕದ ಹೆಮ್ಮೆಯ ಉದ್ಯಮಿ ಶ್ರೀ ವಿಜಯ ಸಂಕೇಶ್ವರ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಆ ಸಂದರ್ಭದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ವಿಜಯ್ ಸಂಕೇಶ್ಚರ್ ಅವರನ್ನು ಅಭಿನಂದಿಸಿ, ಸನ್ಮಾನಿಸಿ ಆಶೀರ್ವದಿಸಿದರು. ಗುರೂಜಿ ಭಕ್ತರು ಮತ್ತು ವಿಜಯ್ ಸಂಕೇಶ್ವರ ಅಭಿಮಾನಿಗಳು ಈ ಸಂತೋಷದ ಸಮಯದಲ್ಲಿ ಸಾಕ್ಷಿಯಾದರು.

ಶ್ರೀಶೈಲ ಜಗದ್ಗುರು ವಾಗೀಶ್ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಅವರ ಗದ್ದುಗೆ ಪೂಜೆಯಲ್ಲಿ ಪಾಲ್ಗೊಂಡರು

17 Nov 2021 – ಇಂದು ಬೆಳಿಗ್ಗೆ ಅವಧೂತ ಶ್ರೀ ವಿನಯ್‌ ಗುರೂಜಿ ಅವರು ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ದಾರೂಢ ಸ್ವಾಮೀಜಿ ಅವರ ಸಮಾಧಿ ದರ್ಶನವನ್ನ ಪಡೆದ ನಂತರ ಅಲ್ಲಿನ ಶ್ರೀಶೈಲ ಜಗದ್ಗುರು ವಾಗೀಶ್ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಅವರ ಗದ್ದುಗೆ ಪೂಜೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಭಕ್ತಾಧಿಗಳು ಸೇರಿದಂತೆ ಮತ್ತಿತರರು ಸಾಕ್ಷಿಯಾದರು.

ಶ್ರೀ ಸಿದ್ದಾರೂಢ ಸ್ವಾಮೀಜಿ ಅವರ ಸಮಾಧಿ ದರ್ಶನವನ್ನ ಪಡೆದರು

17 Nov 2021 – ಇಂದು ಬೆಳಿಗ್ಗೆ ಅವಧೂತ ಶ್ರೀ ವಿನಯ್‌ ಗುರೂಜಿ ಅವರು ಹುಬ್ಬಳ್ಳಿಯಲ್ಲಿ ಇರುವ ಸದ್ಗುರು ಶ್ರೀ ಸಿದ್ದಾರೂಢ ಸ್ವಾಮೀಜಿ ಅವರ ಸಮಾಧಿ ದರ್ಶನವನ್ನ ಪಡೆದು, ಅವರಿಗೆ ಪೂಜೆ ಸಲ್ಲಿಸಿ ಬಿಲ್ವಪತ್ರೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಸೇರಿದಂತೆ ಮತ್ತಿತರು ಪೂಜೆಯಲ್ಲಿ ಭಾಗಿಯಾದರು.

ಎಸ್ಇಎ ಸಮೂಹ ಸಂಸ್ಥೆಗಳು ಆಯೋಜನೆ ಮಾಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ

15 Nov 2021 – ಎಸ್ಇಎ ಸಮೂಹ ಸಂಸ್ಥೆಗಳು ಆಯೋಜನೆ ಮಾಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವಧೂತ ಶ್ರೀ ವಿನಯ್ ಗುರೂಜಿ ಅವರು ಎಸ್ಇಎ ಸಂಸ್ಥೆಯ ಆವರಣದಲ್ಲಿ ಇರುವ ಶಾರದಾ ಪರಮೇಶ್ವರಿ ಮತ್ತು ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕಾಲೇಜಿನ ಆವರಣದ ದೇವಸ್ಥಾನದಲ್ಲಿ ಕಾರ್ತೀಕ ಸೋಮವಾರದ ಪ್ರಯುಕ್ತ ಜರುಗಿದ ವಿಶೇಷ ಹೋಮದಲ್ಲಿ ಪಾಲ್ಗೊಂಡರು. ನಂತರ ನಡೆದ ಕಾಲೇಜಿನ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ವಿನಯ್ ಗುರೂಜಿ ಅವರು ಶಾಲೆಯ ಮಗುವೊಂದಕ್ಕೆ ಸನ್ಮಾನ ಮಾಡಿದರು. ವಿದ್ಯಾರ್ಥಿಗಳಿಗೆ ಹಿತವಚನ ಬೋಧಿಸಿದ ಅವಧೂತ ಶ್ರೀ ವಿನಯ್ ಗುರೂಜಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಪ್ರಶಂಸಿಸಿದರು. ಇದಾದ ನಂತರ ಎಸ್ಇಎ ಸಮೂಹ ಸಂಸ್ಥೆಗಳ ಸಂಸ್ಥಾಪಕ ದಿವಂಗತ ಕೃಷ್ಣಪ್ಪ ಅವರ ಸಮಾಧಿ ಸ್ಥಳ ಕೃಷ್ಣ ಮಹಲ್ ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಆರೋಗ್ಯಕರ ಭಾರತಕ್ಕಾಗಿ ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಭಾನುವಾರ ವಿಶೇಷ ಯಾಗವನ್ನು ಹಮ್ಮಿಕೊಳ್ಳಲಾಗಿತ್ತು

8 Nov 2021 –  ಕಳೆದೆರಡು ವರ್ಷಗಳಿಂದ ಇಡೀ ವಿಶ್ವ ಕರೋನ ಮಹಾಮಾರಿಗೆ ತತ್ತರಿಸಿದೆ. ಅದರಲ್ಲೂ ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಭೀಕರ ಖಾಯಿಲೆಗಳು ದೇಶವನ್ನು ಬಾಧಿಸುತ್ತಿದೆ. ಹಾಗಾಗಿ ಆರೋಗ್ಯಕರ ಭಾರತಕ್ಕಾಗಿ ಅವಧೂತ ಶ್ರೀ ವಿನಯ್ ಗುರೂಜಿ ನೇತೃತ್ವದಲ್ಲಿ ಭಾನುವಾರ ವಿಶೇಷ ಯಾಗವನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕಮಗಳೂರಿನ ಗೌರಿ ಗದ್ದೆ ಆಶ್ರಮದಲ್ಲಿ ಶ್ರೀ ವಿನಯ್ ಗುರೂಜಿ ಅವರು 1008 ಗಿಡ ಮೂಲಿಕೆಗಳಿಂದ ರುದ್ರ ಸಹಿತ ಧನ್ವಂತರಿ ಯಾಗ ವನ್ನು ನೆರವೇರಿಸಿದರು. ಇದೇ ಸಮಯದಲ್ಲಿ ವಸ್ತ್ರಗಳನ್ನು ದಾನ ಮಾಡಲಾಯಿತು ಮತ್ತು ಆಶ್ರಮದ ಆವರಣದಲ್ಲಿ ಕಲ್ಪವೃಕ್ಷ ಸಸಿಗಳನ್ನು ನೆಡಲಾಯಿತು. 

ಪಬ್ಲಿಕ್‌ ಟಿವಿ ಸುದ್ದಿ ವಾಹಿನಿಯ ಮುಖ್ಯಸ್ಥ ಹೆಚ್ ಆರ್‌ ರಂಗನಾಥ್ ಅವರು ಅವಧೂತರನ್ನ ಭೇಟಿಯಾದರು

 1 November 2021 – ಪಬ್ಲಿಕ್‌ ಟಿವಿ ಸುದ್ದಿ ವಾಹಿನಿಯ ಮುಖ್ಯಸ್ಥರಾದ ಹೆಚ್ ಆರ್‌ ರಂಗನಾಥ್ ಅವರು ಇಂದು ಅವಧೂತ ಶ್ರೀ ವಿನಯ್‌ ಗುರೂಜಿ ಅವರನ್ನು ಬೆಂಗಳೂರಿನ ಉತ್ತರಹಳ್ಳಿಯ ಆಶ್ರಮದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಗುರುಗಳು ಅವರಿಗೆ ಫಿಡಿಲಿಟಸ್ ಗ್ಯಾಲರಿಯ ಪ್ರಮುಖ ಕಲಾವಿದ ಕೋಟೆಗದ್ದೆ ಎಸ್ ರವಿ ವರು ರಚಿಸಿದ ಭಾವಚಿತ್ರವನ್ನು ನೀಡಿ ಆಶೀರ್ವಾದಿಸಿದರು.

ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ

Avadhootha
Avadhootha

17 Oct 2021 – ಶಿವಮೊಗ್ಗದ ಶ್ರೀ ಶನೈಶ್ಚರ ದೇವಾಲಯ ಸಮಿತಿ, ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಮತ್ತು ಶ್ರೀಗಂಧ ಸಂಯುಕ್ತಾಶ್ರಯದಲ್ಲಿ ಶ್ರೀ ಶುಭಮಂಗಳ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ವಿನೋಬ ನಗರದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ನೂರಾರು ಭಕ್ತರು ಅವಧೂತರ ಆಶೀರ್ವಾದವನ್ನು ಪಡೆದರು. ಕಾರ್ಯಕ್ರಮದಲ್ಲಿ ಮಹರ್ಷಿ ಶ್ರೀ ಆನಂದ್ ಗುರೂಜಿ, ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಮಾರಿಕಾಂಬ ಮೈಕ್ರೋ ಫೈನಾನ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಕಾಂತೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರನ್ನು ಸಚಿವ ಕೆ ಎಸ್ ಈಶ್ವರಪ್ಪ ಅವರು ಸನ್ಮಾನಿಸಿ ಸತ್ಕರಿಸಿದರು.

ನವರಾತ್ರಿ ಪ್ರಯುಕ್ತ - ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ಗುತ್ತಿಯಮ್ಮ ದೀವಿ ದೇವಸ್ತಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾದರು

13 Oct 2021 – ನವರಾತ್ರಿ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ಅವರು ಕೊಪ್ಪ ತಾಲ್ಲೂಕಿನ ಹುಲುಮಕ್ಕಿಯಲ್ಲಿರುವ ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ಗುತ್ತಿಯಮ್ಮ ದೀವಿ ದೇವಸ್ತಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಇದೇ ಸಂದರ್ಭದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮತ್ತು ಮಹಿಳೆಯರಿಗೆ ಬಾಗಿನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧರಾದ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಅವಧೂತರು ಭಕ್ತರಿಗೆ ಭರವಸೆ ನೀಡಿದರು.
ಇದಾದ ನಂತರ ಕೊಪ್ಪದ ಇಂದಿರಾನಗರದಲ್ಲಿರುವ ಶ್ರೀ ಶ್ರೀ ಚಕ್ರಸಹಿತ ಚೌಡೇಶ್ವರಿ ಮತ್ತು ಶ್ರೀ ನಾಗದೇವತಾ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀ ವಿನಯ್ ಗುರೂಜಿ ನಾಗರಕಲ್ಲಿಗೆ ಪೂಜೆ ಸಲ್ಲಿಸಿದರು. ಮಹಿಳೆಯರಿಗೆ ಬಾಗಿನ ನೀಡಿ ಭಕ್ತರಿಗೆ ಆಶೀರ್ವದಿಸಿದರು.

ಶ್ರೀ ಕಾಲಭೈರವ ಸ್ವಾಮಿಯ ಪೂಜಾ ಕಾರ್ಯಕ್ರಮ

Avadhoota
Avadhoota
Avadhoota
Avadhoota

5 Out 2021 – ಮಹಾಲಯ ಅಮಾವಾಸ್ಯೆ ಪ್ರಯುಕ್ತ ಬೆಂಗಳೂರಿನ ಕುಂಬಳಗೋಡಿನಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಬಿಜಿಎಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ ಪ್ರಕಾಶ್ ನಾಥ್ ಸ್ವಾಮಿಜಿ ಅವರು ಶ್ರೀ ಕಾಲಭೈರವ ಸ್ವಾಮಿಯ ಪೂಜಾ ಕಾರ್ಯ ಕೈಗೊಂಡರು. ಈ ಶುಭ ಸಂದರ್ಭದಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರು ಸಹ ಶ್ರೀ ಕಾಲಭೈರವ ಸ್ವಾಮಿಯ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಬಿಜಿಎಸ್ ಸಮೂಹ ಸಂಸ್ಥೆಗಳ ಸಿಬ್ಬಂದಿಗೆ ಆಶೀರ್ವಾದಿಸಿದರು.

ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೋವಿಡ್ ೧೯ವ್ಯಾಕ್ಸಿನ್ ಕಾರ್ಯಕ್ಕೆ ಅವಧೂತರು ಚಾಲನೆ ನೀಡಿದರು

Avadhoota
Avadhoota
Avadhoota

ಗಾಂಧಿ ಜಯಂತಿ ಅಂಗವಾಗಿ ಅವಧೂತ ಶ್ರೀ ವಿನಯ್ ಗುರೂಜಿ ದಿವ್ಯ ಸಾನಿಧ್ಯದಲ್ಲಿ ಸಿಂಗಸಂದ್ರದಲ್ಲಿ ಹಲವು ಜನಪರ ಕಾರ್ಯಕ್ರಮಗಳು ಜರುಗಿದವು. ಬೃಹತ್ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೋವಿಡ್ ೧೯ವ್ಯಾಕ್ಸಿನ್ ಕಾರ್ಯಕ್ಕೆ ಅವಧೂತರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬೃಹತ್ ನೇತ್ರ ತಪಾಸಣೆ, ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಮತ್ತು ರಕ್ತ ದಾನ ಶಿಬಿರಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಮಾಜಿ ಪಾಲಿಕೆ ಸದಸ್ಯ ಶ್ರೀನಿವಾಸ್ ನೇತೃತ್ವದಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಹಲವು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಉತ್ತರಹಳ್ಳಿ ಬಳಿಯ ಭಾರತ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಯ ಪಾದುಕಾ ಮಂದಿರದ ಬಳಿ ಜರುಗಿದ ಬೃಹತ್ ಸಸಿ ನೆಡುವ ಕಾರ್ಯಕ್ರಮ

Avadhoota
Avadhoota
Avadhoota
Avadhoota
Avadhoota
Avadhoota

ಉತ್ತರಹಳ್ಳಿ ಬಳಿಯ ಭಾರತ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಯ ಪಾದುಕಾ ಮಂದಿರದ ಬಳಿ ಜರುಗಿದ ಬೃಹತ್ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಹಾತ್ಮಾ ಗಾಂಧೀ ಮತ್ತು ದಿವಂಗತ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪೋಟೋ ಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಜರುಗಿದ ನಂತರ ಹೂವು ಹಾಕಿ ನಮಿಸಿದರು. ಭಾರತ್ ಹೌಸಿಂಗ್ ಕೋ‌ಆಪರೇಟಿವ್ ಸೊಸೈಟಿಯ ಪಾರ್ಕ್ ನಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವಧೂತ ಶ್ರೀ ವಿನಯ್ ಗುರೂಜಿ ಹಲವು ಔಷಧೀಯ ಸಸ್ಯಗಳನ್ನು ನೆಟ್ಟರು. ಅಲ್ಲದೇ ಅವದುಂಬರ ಮತ್ತು ಅರಳೀ ಗಿಡಗಳನ್ನು ಹೆಚ್ಚು ಹೆಚ್ಚು ನೆಡಲು ಸಾರ್ವಜನಿಕರಿಗೆ ಕರೆ ನೀಡಿದರು. ಒಂದು ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತ್ಯಾಗಿ. ಏಕೆಂದರೆ, ತನ್ನ ಕುಟುಂಬಕ್ಕೆ ಮತ್ತು ತನ್ನವರಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿರುತ್ತಾರೆ. ಅವನಿಗೆ ಹೋಲಿಸಿದರೆ, ನಮ್ಮ ಕಣ್ಣು ಮುಂದೆ ಮಾದರಿಯಾಗಿ ನಿಲ್ಲುವುದು ನಮ್ಮ ಬಾಪೂಜಿ ಅವರು. ಯಾಕೆಂದರೆ ಅವರು ತಮ್ಮ ಕನಸೇ ನನ್ನ ದೇಶ ಎಂದೂ ಜೀವಿಸಿದವರು. ಅಲ್ಲದೇ ದೇಶಕ್ಕಾಗಿ, ಜನಕ್ಕಾಗಿ ಪ್ರತಿ ಕ್ಷಣ ದುಡಿದು ಜನರಿಗಾಗಿ ತಮ್ಮ ಪ್ರಾಣ ತ್ಯಾಗವನ್ನು ಮಾಡಿದ ಮಾಹಾತ್ಮರು. ಅವರನ್ನು ನೆನೆಯುವುದು ನಮ್ಮೆಲ್ಲರ ಪುಣ್ಯ. ಅಹಿಂಸೆಯ ಮಾರ್ಗದಲ್ಲಿ ಎಲ್ಲವನ್ನೂ ಗೆಲ್ಲುವ ಶಕ್ತಿ ಇದೆ ಎಂಬುದನ್ನು ತಿಳಿಸಿಕೊಟ್ಟವರೇ ಅವರು” ಎಂದು ಶ್ರೀ ವಿನಯ್ ಗುರೂಜಿ ಅವರು ಸಲಹೆ ನೀಡಿದರು. ಅವಧೂತ ಶ್ರೀ ವಿನಯ್ ಗುರೂಜಿ ಹಲವು ಔಷಧೀಯ ಸಸ್ಯಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕರಾದ ಅಚ್ಯುತ್ ಗೌಡರು, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಿವರಾಜ್, ಮಾಜಿ ಕಾರ್ಪೊರೇಟರ್ ಹನುಮಂತಯ್ಯ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಾಜಿ ಕಾರ್ಪೊರೇಟರ್ ರಮೇಶ್ ರಾಜು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಉತ್ತರಹಳ್ಳಿ ಸ್ಮಶಾನದಲ್ಲಿ ಸ್ವಚ್ಚತಾ ಕಾರ್ಯ ಮತ್ತು ಸಸಿ ನೆಡುವ ಕಾರ್ಯಕ್ರಮ

Avadhoota
Avadhoota
Avadhoota
Avadhoota

ಬೆಳಗ್ಗೆ 8ಗಂಟೆಗೆ ಉತ್ತರಹಳ್ಳಿ ಸ್ಮಶಾನದಲ್ಲಿ ಸ್ವಚ್ಚತಾ ಕಾರ್ಯ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿದ್ದ ಅವಧೂತ ಶ್ರೀ ವಿನಯ್ ಗುರೂಜಿ ಅವರು ಉತ್ಸಾಹಿಯಂತೆ ಗಿಡನೆಟ್ಟರು ಮತ್ತು ಎಲ್ಲರೂ ಸ್ವಚ್ಚತಾ ಕಾರ್ಯವನ್ನು ಮೈಗೂಡಿಸಿಕೊಂಡು ನಮ್ಮ ಪರಿಸರ ರಕ್ಷಣಾ ಹೊಣೆಯನ್ನು ಚಾಚು ತಪ್ಪದೆ ಪಾಲಿಸಬೇಕು ಎಂದು ಕರೆ ನೀಡುವುದರ ಮೂಲಕ ಮಾದರಿಯಾದರು. ಅಲ್ಲದೇ ಮುಂದಿನ ದಿನಗಳಲ್ಲಿ ಪ್ರತಿ ಸಮಾಧಿ ಪಕ್ಕದಲ್ಲಿ ಒಂದೊಂದು ಹೂ ಬಿಡುವ ಗಿಡ ನೆಡಲು ಸಲಹೆ ನೀಡಿದರು. ” ಈ ಮೂಲಕ ಸಮಾಧಿಯಲ್ಲಿ ಮಲಗಿರುವ ಶರೀರಕ್ಕೆ ನೆರಳು ಸಿಗುತ್ತದೆ ಮತ್ತು ಪ್ರತಿದಿನ ಸಮಾಧಿಗೆ ಹೂ ಬೀಳುತ್ತದೆ ಎಂದು ಪರಿಸರ ಪ್ರೇಮಿಗಳಿಗೆ ತಿಳಿಸಿದರು. “ದೇಶವನ್ನ ಸ್ವಚ್ಛಗೊಳಿಸುವ ಮುನ್ನ ನಮ್ಮ ನಮ್ಮ ಮನಸ್ಸುಗಳನ್ನು ಸ್ವಚ್ಛಗೊಳಿಸಿಕೊಂಡು ಕಲ್ಮಶಗಳನ್ನು ಹೊರಹಾಕಿ ಕೆಲಸ ಮಾಡೋಣ” ಎಂದು ಯುವ ಜನತೆಗೆ ಕರೆ ನೀಡಿದರು. ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕರಾದ ಅಚ್ಯುತ್ ಗೌಡರು, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಿವರಾಜ್, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು

ಗಾಂಧಿ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್

Avadhoota sri vinay guruji
Avadhoota guruji
Avadhoota guruji
Avadhoota

ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಧಾನಸೇವಕನೇ – ಶ್ರೀ ವಿನಯ್ ಗುರೂಜಿ
ಗಾಂಧಿ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ ಆಶ್ರಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಸ್ಚಚ್ಛತಾ ಕಾರ್ಯಕ್ರಮ ಮತ್ತು ಕ್ಲೀನಥಾನ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 7 ಗಂಟೆಗೆ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ಅವಧೂತ ವಿನಯ್ ಗುರೂಜಿ ಅವರು ಸ್ವಚ್ಛ ಭಾರತದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ಮಾಡಿದರು. “ದೇಶದಲ್ಲಿರೋ ಪ್ರತಿಯೊಬ್ಬರು ಪ್ರಧಾನ ಸ್ಥಾನದಲ್ಲೇ ಇದ್ದಾರೆ. ಎಲ್ಲರೂ ಒಗ್ಗೂಡಿದರೆ ಎಲ್ಲವೂ ಸುಲಭ ಸಾಧ್ಯವಾಗುತ್ತದೆ. ಜಾತಿ ಇಲ್ಲದ ಗುಂಪು ಎಂದು ಯಾವುದಾದರೂ ಇದ್ದರೆ ಅದು ವಿದ್ಯಾರ್ಥಿಗಳು ಮಾತ್ರ. ಹಾಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಹೆಚ್ಚು ಜವಾಬ್ದಾರಿಗಳನ್ನು ತೆಗೆದುಕೊಂಡು ಸಮಾಜವನ್ನು ಮುನ್ನಡೆಸಬೇಕು” ಎಂದು ಯುವಜನತೆಯಲ್ಲಿ ಉತ್ಸಾಹ ಮೂಡಿಸಿದರು. ದೇಶವನ್ನ ಸ್ವಚ್ಛ ಗೊಳಿಸುವ ಮುನ್ನ ನಮ್ಮ ನಮ್ಮ ಮನಸ್ಸುಗಳನ್ನು ಸ್ವಚ್ಛಗೊಳೊಸಿಕೊಂಡು ಕಲ್ಮಶಗಳನ್ನು ಹೊರಹಾಕಿ ಕೆಲಸ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಶ್ರೀ ವಿನಯ್ ಗುರೂಜಿ ಅವರು ವಿಶ್ವವಿದ್ಯಾಲಯ ಕ್ಯಾಂಪಸ್ ನ ಬಯೋ ಪಾರ್ಕ್ ನ ಸ್ಚಚ್ಛತಾ ಕಾರ್ಯ ಮತ್ತು ಗಿಡ ನೆಡುವ ಕಾರ್ಯಕ್ರಮದಲ್ಲಿ ಅತ್ಯುತ್ಸಾಹದಲ್ಲಿ ಭಾಗಿಯಾಗಿ ಯುವಜನತೆಗೆ ಮಾದರಿಯಾದರು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಸೇವಾಟ್ರಸ್ಟ್ ಉಪಾಧ್ಯಕ್ಷ ಹಾಗೂ ಶಿಲ್ಪಾ ಫೌಂಡೇಶನ್ ಸಂಸ್ಥಾಪಕರಾದ ಅಚ್ಯುತ್ ಗೌಡರು, ಟ್ರಸ್ಟ್ ಕಾರ್ಯದರ್ಶಿ ಶಿವರಾಜ್, ಬೆಂಗಳೂರು ವಿವಿ ಸಿಂಡಿಕೇಟ್‌ ಸದಸ್ಯ ಪ್ರೇಮ್, ಬಯೋಪಾರ್ಕ್ ಉಸ್ತುವಾರಿ ಗಿರೀಶ್ ಅವರುಗಳು ಉಪಸ್ಥಿತರಿದ್ದರು. ಈ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ನೂರಾರು ವಿದ್ಯಾರ್ಥಿಗಳು ಮತ್ತು ಪರಿಸರ ಪ್ರೇಮಿಗಳು ಸಾಕ್ಷಿಯಾದರು.

ಹೈದರಾಬಾದ್‌ ಪ್ರವಾಸದ ಸಂದರ್ಭದಲ್ಲಿ ಕೃಷ್ಣಾನದಿಯಲ್ಲಿ ಬೋಟ್ ನಲ್ಲಿ ಸಂಚರಿಸುತ್ತ ಪ್ರಕೃತಿ ಸೌಂದರ್ಯವನ್ನು ಸವಿದರು

Avadhoota
Avadhoota guruji
Avadhoota
Avadhoota guruji

ಅವಧೂತ ಶ್ರೀ ವಿನಯ್‌ ಗುರೂಜಿ ಅವರು ಹೈದರಾಬಾದ್‌ ಪ್ರವಾಸದ ಸಂದರ್ಭದಲ್ಲಿ ಕೃಷ್ಣಾನದಿಯಲ್ಲಿ ಬೋಟ್ ನಲ್ಲಿ ಸಂಚರಿಸುತ್ತ ಪ್ರಕೃತಿ ಸೌಂದರ್ಯವನ್ನು ಸವಿದರು. ದಕ್ಷಿಣ ಭಾರತದ ಎರಡನೇ ದೊಡ್ಡ ನದಿಯಾಗಿರುವ ಕೃಷ್ಣಾ, ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಹರಿದು ರಾಜ್ಯದ ಗಡಿಯನ್ನು ಸೀಮೋಲ್ಲಂಘನೆ ಮಾಡಿ ಆಂಧ್ರಪ್ರದೇಶವನ್ನು ಪ್ರವೇಶಿಸಿ ನಂತರ ಬಂಗಾಳ ಕೊಲ್ಲಿ ಸೇರುತ್ತದೆ. ಕರ್ನಾಟಕದ ಪ್ರಮುಖ ಜೀವನದಿ ಆಗಿರುವ ಕೃಷ್ಣಾ, ಆಂಧ್ರದ ಪ್ರಮುಖ ಪ್ರವಾಸಿ ಸ್ಥಳ ಶ್ರೀಶೈಲಂ ಮೂಲಕ ಹರಿಯುವ ಕೃಷ್ಣಾ ರುದ್ರ ರಮಣೀಯ ಬೆಟ್ಟಗುಡ್ಡಗಳ ಮಧ್ಯೆ ಸಾಗಿ ನೀಲ ಸಾಗರವನ್ನು ಸೇರುತ್ತದೆ. ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಾ ಬೇಳೂರು ರಾಘವೇಂದ್ರ ಶೆಟ್ಟಿ, ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ ನ ಕಾರ್ಯದರ್ಶಿಯಾಗಿರುವ ಶಿವರಾಜಗೌಡ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕರೋನ ಪಿಡುಗಿನಿಂದ ರಕ್ಷಿಸಿಕೊಳ್ಳುವ ಸಾಮಾಜಿಕ ಕಳಕಳಿ ಕಾರ್ಯಕ್ರಮ

Guruji
Guruji
Guruji
Guruji
ಅವಧೂತ ಶ್ರೀ ವಿನಯ್ ಗುರೂಜಿ ಅವರು ದಿನಾಂಕ 23-09-2021 ರಂದು ಕರೋನ ಪಿಡುಗಿನಿಂದ ರಕ್ಷಿಸಿಕೊಳ್ಳುವ ಸಾಮಾಜಿಕ ಕಳಕಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರೀ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಾಸ್ಕ್,  ಸ್ಯಾನಿಟೈಸರ್, ಜ್ಯೂಸ್ ಕಿಟ್ ವಿತರಿಸಿದರು. ಜೆಪಿ  ನಗರದ  ಆರ್ಬಿ  ಐ ಲೇಔಟ್ ನಲ್ಲಿರುವ ಸರ್ಕಾರೀ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು, ಅಧ್ಯಾಪಕರು ಸೇರಿದಂತೆ ಸುಮಾರು 1200 ಜನರಿಗೆ ಆಶ್ರಮದ ವತಿಯಿಂದ ಕಿಟ್ ವಿತರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು ಅವಧೂತರನ್ನು ಭೇಟಿ ಮಾಡಿ ಪುನೀತರಾದರು ಮತ್ತು ಗುರೂಜಿ ಅವರ ಆಶೀರ್ವಾದವನ್ನು ಪಡೆದುಕೊಂಡರು. ಈ ಕಾರ್ಯಕ್ರಮದ ನಂತರ ಬಿಬಿಎಂಪಿ ಪೌರ ಕಾರ್ಮಿಕರಿಗೂ ಅವಧೂತ ವಿನಯ್ ಗುರೂಜಿ ಅವರು ಮಾಸ್ಕ್, ಸ್ಯಾನಿಟೈಸರ್ ಮತ್ತು ಜ್ಯೂಸ್ ಒಳಗೊಂಡ ಕಿಟ್ ವಿತರಿಸಿದರು. 

ಅವಧೂತ ಶ್ರೀ ವಿನಯ್ ಗುರೂಜಿ ಅವರ ಕಾಶಿ ಪ್ರವಾಸ

ಅವಧೂತ ಶ್ರೀ ವಿನಯ್ ಗರೂಜಿ ಅವರು ಕಾಶಿ ಪ್ರವಾಸದ ಹಿನ್ನೆಲೆಯಲ್ಲಿ ಅವಧೂತ ತಂಡದೊಂದಿಗೆ ದಿನಾಂಕ 15-09-2021 ರಿಂದ ೫ ದಿನಗಳ ಪ್ರವಾಸವನ್ನು ಕೈಗೊಂಡಿದ್ದರು. ಈ ಸಂದರ್ಭದಲ್ಲಿ ವಾರಣಾಸಿಯ ವಿಮಾನ ನಿಲ್ದಾಣದಲ್ಲಿ ಶ್ರೀ ವಿನಯ್ ಗುರೂಜಿ ಅವರಿಗೆ ಗೌರವ ಪೂರ್ವಕ ಸ್ವಾಗತವನ್ನು ಕೋರಲಾಯಿತು. ವಾರಣಾಸಿಗೆ ತಲುಪಿದ ನಂತರ ಮಹಾರಾಣಿ ಮುಕ್ತಿ ದೇವಿ ಗೋಶಾಲೆಗೆ ಭೇಟಿ ನೀಡಿ ಅಲ್ಲಿನ ಗೋವುಗಳ ಜೊತೆ ಕೆಲ ಸಮಯವನ್ನು ಕಳೆದರು. ಜೊತೆಗೆ ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಇರುವ ಮಹತ್ವ ಮತ್ತು ಮಾನವನಿಗೆ ಅದೆಷ್ಟು ಆತ್ಮೀಯ ಎಂಬುದರ ಬಗ್ಗೆ ಎಲ್ಲರಲ್ಲಿಯೂ ಮನವರಿಕೆ ಮಾಡಿದರು. ಅಲ್ಲಿಂದ ವಿಹಂಗಮ್ ಯೋಗ ಕೇಂದ್ರಕ್ಕೆ ಭೇಟಿ ನೀಡಿ, ಸದ್ಗುರು ಆಚಾರ್ಯ ಶ್ರೀ ಸ್ವತಂತ್ರ ದಿಯೋ ಜೀ ಮಹಾರಾಜ್ ಅವರನ್ನು ಭೇಟಿ ಮಾಡಿ ಆಶೀರ್ವಚನವನ್ನು ಪಡೆದರು. ಸದ್ಗುರು ಸದಾಫಲ್ ದಿಯೋ ಆಧ್ಯಾತ್ಮಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ವೈದಿಕ ಗುರುಕುಲದಲ್ಲಿ ಸಮಯವನ್ನು ಕಳೆಯುವಾಗ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಗುರುಕುಲದ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಾರಣಾಸಿಯಲ್ಲಿನ ಪೀಠಕ್ಕೆ ತಲುಪಿದಾಗ ಜಗಂವಾಡಿ ಮಠದ ಜಗದ್ಗುರು ಪಂಚ ಪೀಠ ಕಾಶೀ ಶ್ರೀಗಳನ್ನು ಭೇಟಿ ಮಾಡಿ ಕಾಶಿ ಜಗದ್ಗುರುಗಳ ಇಷ್ಟ ಲಿಂಗ ಪೂಜೆ ಮತ್ತು ಶ್ರೀಗಳ ಪಾದ ಪೂಜೆಯನ್ನು ನೆರೆವೇರಿಸಿದರು. ನಂತರ ಜಗದ್ಗುರು ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜಗದ್ಗುರು ಡಾ. ಚಂದ್ರಶೇಖರ ಶಿವಚಾರ್ಯ ಭಗವತ್ಫಾದರ ಚಾತುರ್ಮಾಸ್ಯ ಶಿವಪೂಜಾನುಷ್ಠಾನದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ನಂತರ ವಿನಯ್ ಗುರೂಜಿ ಅವರಿಗೆ ಕಾಶಿ ಜಗದ್ಗುರುಗಳು ಶ್ರೀ ಸಿದ್ದಾಂತ ಶಿಖಾಮಣಿ ಗ್ರಂಥವನ್ನು ನೀಡಿ ಆಶೀರ್ವಾದಿಸಿದರು.

ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆ ಯಲ್ಲಿ ಜರುಗುತ್ತಿರುವ ಶ್ರೀ ರಾಮ ಮಂದಿರದ ಕಾಮಗಾರಿಯನ್ನು ವೀಕ್ಷಿಸಿ ಸಂತಸಪಟ್ಟರು. ಅಂದು ಕಾಶಿಯ ಗಂಗಾ ತಟದಲ್ಲಿ ನಡೆಯುವ ಸಂಜೆಯ ವಿಶೇಷ ಗಂಗಾ ಆರತಿಯಲ್ಲಿ ಭಾಗಿಯಾಗಿ ಗಂಗಾ ನದಿಯಲ್ಲಿ ದೀಪವನ್ನು ತೇಲಿಬಿಡುವ ಮೂಲಕ ಗಂಗೆಯ ಪೂಜೆಯನ್ನು ನೆರೆವೇರಿಸಿದರು. ಗುರೂಜಿ ಅವರ ಪ್ರವಾಸದ ಸಂದರ್ಭದಲ್ಲಿ ಪ್ರಮುಖ ಸ್ಥಳೀಯ ಗಣ್ಯರ ಜೊತೆಗೆ ಅವಧೂತರ ಹಲವಾರು ಭಕ್ತ ಅನುಯಾಯಿಗಳು ಅವರ ಜೊತೆಗೂಡಿದರು.

75 ನೇ ಸ್ವಾತಂತ್ರ್ಯ ದಿನ ಆಚರಣೆ

fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
fidelitus_komal
ಇಂದು 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅವಧೂತ ಶ್ರೀ ವಿನಯ್ ಗುರೂಜಿ ರವರ ಸಮ್ಮುಖದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಹಾಗೂ ಹೆಚ್ ಎಂ  ಚನ್ನೆಗೌಡ ವಿದ್ಯಾನಿಲಯ ಸಹಯೋಗದೊಂದಿಗೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶಿವಪುರದ ಧ್ವಜ ಸತ್ಯಾಗ್ರಹ ಸೌಧದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಮಕ್ಕಳು, ಹಿರಿಯರು, ಸ್ಥಳೀಯ ನಾಗರಿಕರು ಉತ್ಸುಕರಾಗಿ ಭಾಗವಹಿಸಿ ಸಂಭ್ರಮಿಸಿದರು. ಇದೇ ವೇಳೆ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಅವಧೂತ ತಂಡದಿಂದ ಸಸಿಗಳನ್ನು ನೆಟ್ಟು ನೀರೆರೆದು ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು.

ಕೋವಿಡ್‌ ಸೇನಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪರವರ ಜೊತೆಯಾದ ಅವಧೂತ ಶ್ರೀ ವಿನಯ್‌ ಗರೂಜಿ

fidelitus_komal
fidelitus_komal
fidelitus_komal

ಅವಧೂತ ಶ್ರೀ ವಿನಯ್ ಗುರೂಜಿ ರವರ ಸಮ್ಮುಖದಲ್ಲಿ ಇಂದು ಮಧ್ಯಾಹ್ನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ರವರೊಂದಿಗೆ ಜಯನಗರದ ಕೋವಿಡ್19 ಎರಡನೇ ಅಲೆಯಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಿಂದುಳಿದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಕೊರೋನಾ ಸೇನಾನಿಗಳನ್ನು ಸನ್ಮಾನಿಸಿದರು. ಕಂದಾಯ ಸಚಿವರಾದ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ಮಾಜಿ ನಗರಪಾಲಿಕೆ ಸದಸ್ಯ ಸಿ ಕೆ ರಾಮಮೂರ್ತಿ ಹಾಗೂ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶಿವರಾಜ್ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

"ಏಕಂ-ದ್ವಿ-ತ್ರಿಣಿ" - ಯೋಗ ಮಾಡೋಣ ಉತ್ತಮ ಆರೋಗ್ಯ ಹೊಂದೋಣ

fidelitus_komal

ಅವಧೂತ ತಂಡದ ವತಿಯಿಂದ ಅವಧೂತ ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ ದಿನಾಂಕ 21-06-2021ರಂದು ಸಂಜೆ 4 ಗಂಟೆಗೆ ವಿಶ್ವ ಯೋಗ ದಿನಾಚಾರಣೆಯನ್ನು ಹಮ್ಮಿಕೊಂಡಿದ್ದು.

ಕಾರ್ಪೋರೇಟ್ ಆಶಾಕಿರಣ

fidelitus_komal

ಕಾರ್ಪೋರೇಟ್ ಆಶಾಕಿರಣ ಎಂಬ ಸಂವಾದ ಕಾರ್ಯಕ್ರಮವನ್ನು ಅವಧೂತ ಶ್ರೀ ವಿನಯ್ ಗುರೂಜಿ ಅವರ ಸಾರಥ್ಯದಲ್ಲಿ ದಿನಾಂಕ 30-05-2021ರ ಬೆಳಿಗ್ಗೆ 11.30ಕ್ಕೆ ಜೂ಼ಮ್ ಮೀಟಿಂಗ್ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿತ್ತು. ರಾಘವ ಸುವರ್ಣ (ನಿರ್ದೇಶಕರು -ಸಾಫ್ಟೆಕ್ ಇಂಡಿಯಾ), ವಿಶ್ವನಾಥಂ ಪಿ (ನಿರ್ದೇಶಕರು – ಮೈಂಡ್ ಟ್ರೀ), ಅವಿನಾಶ್ ಗೌಡ (ಮಾನವ ಸಂಪನ್ಮೂಲ ನಿರ್ವಾಹಕರು ಎಲ್ ಕೆ ಕ್ಯೂ ಇಂಡಿಯಾ), ನಿತೀಶ್ ಮೂರ್ತಿ (ಮುಖ್ಯಸ್ಥರು – ಸೌಲಭ್ಯ ನಿರ್ವಹಣೆ ಬ್ರಿಲಿಯೋ), ಅಚ್ಚುತ್ ಗೌಡ (ಸಂಸ್ಥಾಪಕರು – ಫಿಡೆಲಿಟಸ್ ಕಾರ್ಪ್), ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ‌‌ ಸಂಪೂರ್ಣ ನಿರೂಪಣೆಯನ್ನು ಮಾಲತೇಶ್ ಸಿಗಸೆ ಅವರು ನಿರ್ವಹಿಸಿಕೊಟ್ಟರು.

Download Avadhootha APP

Download the Avadhootha app for regular pravachanas of his holiness Vinay Guruji.

AShrama Head Quarters

Bengaluru Branch Office

Seva kriya

Download our app

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.